ಈ ಗೌಪ್ಯತಾ ಪ್ರಕಟಣೆಯು, ಮಾಹಿತಿ ಸಂಗ್ರಹಿಸುವ ಮತ್ತು ಈ ನಿಯಮಗಳನ್ನು ಪ್ರದರ್ಶಿಸುವ Microsoft ವೆಬ್ಸೈಟ್ಗಳು, ಸೇವೆಗಳು ಮತ್ತು ಉತ್ಪನ್ನಗಳಿಗೆ ಹಾಗೂ ಅವುಗಳ ಆಫ್ಲೈನ್ ಉತ್ಪನ್ನ ಬೆಂಬಲ ಸೇವೆಗಳಿಗೆ ಅನ್ವಯಿಸುತ್ತದೆ. ಈ ಗೌಪ್ಯತಾ ಪ್ರಕಟಣೆಯನ್ನು ಪ್ರದರ್ಶಿಸದ ಅಥವಾ ಇದರ ಜೊತೆ ಸಂಪರ್ಕ ಕಲ್ಪಿಸದ ಅಥವಾ ತಮ್ಮದೇ ಆದ ಗೌಪ್ಯತಾ ಪ್ರಕಟಣೆ ಹೊಂದಿರುವ Microsoft ಸೈಟ್ಗಳು, ಸೇವೆಗಳು ಮತ್ತು ಉತ್ಪನ್ನಗಳಿಗೆ, ಇದು ಅನ್ವಯಿಸುವುದಿಲ್ಲ.
ದಯವಿಟ್ಟು ಕೆಳಗಿನ ಸಾರಾಂಶಗಳನ್ನು ಓದಿ ಮತ್ತು ನಿರ್ದಿಷ್ಟ ವಿಷಯದ ಕುರಿತು ಹೆಚ್ಚಿನ ವಿವರಗಳಿಗೆ "ಇನ್ನಷ್ಟು ತಿಳಿಯಿರಿ" ಕ್ಲಿಕ್ ಮಾಡಿ. ಮೇಲೆ ಪಟ್ಟಿ ಮಾಡಿದ ಉತ್ಪನ್ನಗಳನ್ನು ಆಯ್ಕೆ ಮಾಡುವ ಮೂಲಕವೂ ಕೂಡ ಅವುಗಳ ಗೌಪ್ಯತಾ ಪ್ರಕಟಣೆಯನ್ನು ನೀವು ವೀಕ್ಷಿಸಬಹುದು. ಈ ಪ್ರಕಟಣೆಯಲ್ಲಿ ನಮೂದಿಸಿದ ಕೆಲವೊಂದು ಉತ್ಪನ್ನಗಳು, ಸೇವೆಗಳು ಅಥವಾ ಗುಣಲಕ್ಷಣಗಳು ಎಲ್ಲಾ ಮಾರುಕಟ್ಟೆಗಳಲ್ಲಿ ಲಭ್ಯವಿಲ್ಲದೆಯೂ ಇರಬಹುದು. ನಿಮ್ಮ ಗೌಪ್ಯತೆಯನ್ನು ಕಾಪಾಡುವ ಬಗ್ಗೆ, Microsoftಗೆ ಇರುವ ಬದ್ಧತೆಯ ಕುರಿತ ಹೆಚ್ಚಿನ ಮಾಹಿತಿಯನ್ನುಈ ಕೆಳಗಿನ ಜಾಲತಾಣದಲ್ಲಿ ಪಡೆಯಬಹುದು http://www.microsoft.com/privacy.
ಹೆಚ್ಚಿನ Microsoft ಸೈಟ್ಗಳು "ಕುಕೀಗಳನ್ನು" ಬಳಸುತ್ತವೆ, ಇವುಗಳು ಚಿಕ್ಕ ಪಠ್ಯ ಫೈಲ್ಗಳಾಗಿದ್ದು ಇವುಗಳನ್ನು ಡೊಮೇನ್ನಲ್ಲಿ ವೆಬ್ ಬ್ರೌಸರ್ ಓದಬಹುದಾಗಿದ್ದು, ಅವುಗಳು ಕುಕೀಯನ್ನು ನಿಮ್ಮ ಹಾರ್ಡ್ ಡ್ರೈವ್ನಲ್ಲಿ ಇರಿಸುತ್ತವೆ. ನಿಮ್ಮ ಆದ್ಯತೆಗಳು ಮತ್ತು ಸೆಟ್ಟಿಂಗ್ಗಳು ಸಂಗ್ರಹಿಸಲು; ಸೈನ್-ಇನ್ನೊಂದಿಗೆ ಸಹಾಯ ಮಾಡಲು; ಗುರಿಪಡಿಸಿದ ಜಾಹೀರಾತುಗಳನ್ನು ಒದಗಿಸಲು; ಮತ್ತು ಸೈಟ್ ಕಾರ್ಯಾಚರಣೆಗಳನ್ನು ವಿಶ್ಲೇಷಣೆ ಮಾಡಲು ಬಳಸಬಹುದು.
ಕುಕೀಗಳನ್ನು ವಿತರಣೆ ಮಾಡಲು ಸಹಾಯ ಮಾಡಲು ಮತ್ತು ಅನಾಲಿಟಿಕ್ಸ್ ಅನ್ನು ಒಂದುಗೂಡಿಸಲು ಸಹ ನಾವು ವೆಬ್ ಬೀಕನ್ಗಳನ್ನು ಬಳಸುತ್ತೇವೆ. ಇವುಗಳು ಮೂರನೇ-ವ್ಯಕ್ತಿ ವೆಬ್ ಬೀಕನ್ಗಳನ್ನು ಒಳಗೊಂಡಿರಬಹುದು, ಇವುಗಳಿಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸದಂತೆ ನಿಷೇಧಿಸಲಾಗಿದೆ.
ನೀವು ಈ ಮುಂದಿನವುಗಳನ್ನು ಒಳಗೊಂಡು ಕುಕೀಗಳು ಮತ್ತು ಅಂತಹ ತಂತ್ರಜ್ಞಾನಗಳನ್ನು ನಿಯಂತ್ರಿಸಲು ವಿವಿಧ ಪರಿಕರಗಳನ್ನು ಹೊಂದಿರಬಹುದು:
ಕುಕೀಗಳನ್ನು ನಾವು ಬಳಸುವ ರೀತಿ
ಹೆಚ್ಚಿನ Microsoft ವೆಬ್ ಸೈಟ್ಗಳು "ಕುಕೀಗಳನ್ನು" ಬಳಸುತ್ತವೆ ಇವುಗಳು ಚಿಕ್ಕ ಪಠ್ಯ ಫೈಲ್ಗಳಾಗಿದ್ದು, ಇವುಗಳನ್ನು ವೆಬ್ ಬ್ರೌಸರ್ಗಳು ನಿಮ್ಮ ಹಾರ್ಡ್ ಡಿಸ್ಕ್ನಲ್ಲಿ ಇರಿಸುತ್ತವೆ. ಡೊಮೇನ್ನಲ್ಲಿರುವ ನಿಮಗೆ ವಿತರಿಸಿದ ಕುಕ್ಕಿಸ್ನಿಂದ ನಂತರ ಓದಬಹುದಾದ ಮಾಹಿತಿಗಳನ್ನು ಕುಕ್ಕಿಸ್ ಹೊಂದಿವೆ. ಈ ಪಠ್ಯವು ಆಗಾಗ್ಗೆ ನಿಮ್ಮ ಕಂಪ್ಯೂಟರ್ ಅನ್ನು ಅನನ್ಯವಾಗಿ ಗುರುತಿಸುವ ಸಂಖ್ಯೆಗಳು ಮತ್ತು ಅಕ್ಷರಗಳ ಸರಣಿಯನ್ನು ಒಳಗೊಂಡಿರುತ್ತದೆ, ಆದರೆ ಇತರ ಮಾಹಿತಿಯನ್ನೂ ಸಹ ಒಳಗೊಂಡಿರಬಹುದು. ನೀವು ನಮ್ಮ ವೆಬ್ಸೈಟ್ಗಳೊಂದಕ್ಕೆ ಭೇಟಿ ನೀಡಿದಾಗ ನಿಮ್ಮ ಹಾರ್ಡ್ ಡಿಸ್ಕ್ನಲ್ಲಿ Microsoft ಇರಿಸಬಹುದಾದ ಕುಕೀಯಲ್ಲಿ ಸಂಗ್ರಹಿತವಾದ ಪಠ್ಯದ ಉದಾಹರಣೆ ಇಲ್ಲಿದೆ: E3732CA7E319442F97EA48A170C99801
ನಾವು ಕುಕೀಗಳನ್ನು ಕೆಳಕಂಡ ವಿಚಾರಗಳಿಗೆ ಬಳಸಬಹುದು:
ನಾವು ಸಾಮಾನ್ಯವಾಗಿ ಬಳಸುವ ಕೆಲವು ಕುಕೀಗಳನ್ನು ಮುಂದಿನ ಕೋಷ್ಟಕದಲ್ಲಿ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯು ಸಮಗ್ರವಾಗಿಲ್ಲ, ಆದರೆ ನಾವು ಕುಕೀಗಳನ್ನು ಹೊಂದಿಸುವ ಕೆಲವು ಕಾರಣಗಳನ್ನು ವಿಷದೀಕರಿಸುವ ಉದ್ದೇಶವನ್ನು ಹೊಂದಿದೆ. ನಮ್ಮ ವೆಬ್ ಸೈಟ್ಗಳಲ್ಲಿ ಒಂದಕ್ಕೆ ನೀವು ಭೇಟಿ ನೀಡಿದರೆ, ಈ ಮುಂದಿನ ಕೆಲವು ಅಥವಾ ಎಲ್ಲಾ ಕುಕೀಗಳನ್ನು ಸೈಟ್ ಹೊಂದಿಸಬಹುದು:
ಕುಕೀಗಳಿಗೆ ಹೊರತಾಗಿ ನಮ್ಮ ವೆಬ್ ಸೈಟ್ಗಳಿಗೆ ನೀವು ಯಾವಾಗ ಭೇಟಿ ನೀಡುತ್ತೀರಿ ಎನ್ನುವುದನ್ನು Microsoft ಹೊಂದಿಸಬಹುದು, ನೀವು Microsoft ಸೈಟ್ಗಳಿಗೆ ಭೇಟಿ ನೀಡಿದಾಗ ನಿಮ್ಮ ಹಾರ್ಡ್ ಡ್ರೈವ್ನಲ್ಲಿ ಮೂರನೇ ವ್ಯಕ್ತಿಗಳೂ ಸಹ ಕೆಲವು ಕುಕೀಗಳನ್ನು ಹೊಂದಿಸಬಹುದು. ಕೆಲವೊಂದು ಸಂದರ್ಭಗಳಲ್ಲಿ, ಸೈಟ್ ಅನಾಲಿಟಿಕ್ಸ್ನಂತಹ ಕೆಲವು ಸೇವೆಗಳನ್ನು ನಮ್ಮ ಪರವಾಗಿ ಒದಗಿಸಲು ನಾವು ಮೂರನೇ ವ್ಯಕ್ತಿಗಳನ್ನು ನಿಯೋಜಿಸಿರುವ ಕಾರಣದಿಂದಾಗಿರುತ್ತದೆ. ಮತ್ತೊಂದು ಸಂದರ್ಭಗಳಲ್ಲಿ, ವೀಡಿಯೋಗಳು, ಸುದ್ದಿ ವಿಷಯ ಅಥವಾ ಇತರ ಜಾಹೀರಾತು ನೆಟ್ವರ್ಕ್ಗಳಿಂದ ವಿತರಿಸಲ್ಪಟ್ಟ ಜಾಹೀರಾತುಗಳಂತಹ ಮೂರನೇ ವ್ಯಕ್ತಿಗಳಿಂದ ವಿಷಯ ಮತ್ತು ಜಾಹೀರಾತುಗಳನ್ನು ನಮ್ಮ ವೆಬ್ ಪುಟಗಳು ಒಳಗೊಂಡಿರುತ್ತವೆ. ಆ ವಿಷಯವನ್ನು ಹಿಂಪಡೆಯಲು ನಮ್ಮ ಬ್ರೌಸರ್ಗಳು ಆ ಮೂರನೇ ವ್ಯಕ್ತಿಗಳ ವೆಬ್ ಸರ್ವರ್ಗಳಿಗೆ ಸಂಪರ್ಕಪಡಿಸುವುದರಿಂದ, ಆ ಮೂರನೇ ವ್ಯಕ್ತಿಗಳು ನಿಮ್ಮ ಹಾರ್ಡ್ ಡ್ರೈವ್ನಲ್ಲಿ ಅವರ ಸ್ವಂತ ಕುಕೀಗಳನ್ನು ಹೊಂದಿಸಲು ಅಥವಾ ಓದಲು ಸಾಧ್ಯವಾಗುತ್ತದೆ.
ಕುಕೀಗಳನ್ನು ನಿಯಂತ್ರಿಸುವುದು ಹೇಗೆ
ಉದಾಹರಣೆಗಾಗಿ, Internet Explorer 9 ನಲ್ಲಿ, ಮುಂದಿನ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಕುಕೀಗಳನ್ನು ನಿರ್ಬಂಧಿಸಬಹುದು:
ಇತರ ಬ್ರೌಸರ್ನಲ್ಲಿನ ಕುಕೀಗಳನ್ನು ಅಳಿಸಲು ಸೂಚನೆಗಳು ಇಲ್ಲಿ ಲಭ್ಯವಿವೆ http://www.allaboutcookies.org/manage-cookies/.
ಕುಕೀಗಳನ್ನು ನಿರ್ಬಂಧಿಸಲು ನೀವು ಬಯಸಿದರೆ, ಕುಕೀಗಳ ಮೇಲೆ ಆಧಾರಿತವಾಗಿರುವ Microsoft ಸೈಟ್ಗಳು ಮತ್ತು ಸೇವೆಗಳ ಇತರ ಸಂವಹನಕಾರಿ ವೈಶಿಷ್ಟ್ಯಗಳಿಗೆ ಸೈನ್ ಇನ್ ಮಾಡಲು ಅಥವಾ ಬಳಸಲು ನಿಮಗೆ ಸಾಧ್ಯವಾಗದೇ ಇರಬಹುದು, ಮತ್ತು ಕುಕೀಗಳ ಮೇಲೆ ಆಧಾರಿತವಾಗಿರುವ ಕೆಲವು ಜಾಹೀರಾತು ಆದ್ಯತೆಗಳನ್ನು ಗೌರವಿಸಲಾಗದೇ ಇರಬಹುದು ಎಂಬ ವಿಚಾರ ನಿಮಗೆ ತಿಳಿದಿರಲಿ.
ಉದಾಹರಣೆಗಾಗಿ, Internet Explorer 9 ನಲ್ಲಿ, ಮುಂದಿನ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಕುಕೀಗಳನ್ನು ಅಳಿಸಬಹುದು:
ನೀವು ಕುಕೀಗಳನ್ನು ಅಳಿಸಲು ಆಯ್ಕೆ ಮಾಡಿದರೆ, ಜಾಹೀರಾತು ಆದ್ಯತೆಗಳು ಸೇರಿದಂತೆ ಈ ಕುಕೀಗಳಿಂದ ನಿಯತ್ರಿಸಲ್ಪಟ್ಟ ಯಾವುದೇ ಸೆಟ್ಟಿಂಗ್ಗಳು ಮತ್ತು ಆದ್ಯತೆಗಳು ಅಳಿಸುತ್ತವೆ ಮತ್ತು ಮರುರಚಿಸಬೇಕಾಗಬಹುದು.
“ಅನುಸರಿಸದಿರುವಿಕೆ” ಗಾಗಿ ಬ್ರೌಸರ್ ನಿಯಂತ್ರಣಗಳು ಮತ್ತು ಅನುಸರಿಸುವಿಕೆಯಿಂದ ರಕ್ಷಣೆ. ಕೆಲವು ಹೊಸ ಬ್ರೌಸರ್ಗಳು “ಅನುಸರಿಸದಿರುವಿಕೆ” ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಈ ಹೆಚ್ಚಿನ ವೈಶಿಷ್ಟ್ಯಗಳನ್ನು, ಆನ್ ಮಾಡಿದಾಗ, ನಿಮ್ಮನ್ನು ಅನುಸರಿಸಲು ನೀವು ಬಯಸುವುದಿಲ್ಲ ಎಂದು ಸೂಚಿಸಿ ನೀವು ಭೇಟಿ ನೀಡುವ ವೆಬ್ ಸೈಟ್ಗಳಿಗೆ ಸಂಕೇತ ಅಥವಾ ಆದ್ಯತೆಯನ್ನು ಕಳುಹಿಸುತ್ತವೆ. ನೀವು ಈ ಆದ್ಯತೆಯನ್ನು ವ್ಯಕ್ತಪಡಿಸಿದರೂ ಸಹ, ಆಯಾ ಸೈಟ್ನ ಗೌಪ್ಯತೆ ಅಭ್ಯಾಸಗಳನ್ನು ಆಧರಿಸಿ ನೀವು ಅನುಸರಿಸುವಿಕೆ ಎಂದು ಭಾವಿಸಬಹುದಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಆ ಸೈಟ್ಗಳು (ಅಥವಾ ಆ ಸೈಟ್ಗಳಲ್ಲಿ ಇರುವ ಬಾಹ್ಯಸಂಸ್ಥೆಗಳ ವಿಷಯವಸ್ತುಗಳು) ಮುಂದುವರಿಸಬಹುದು.
ಅನುಸರಣೆಯಿಂದ ರಕ್ಷಣೆ ಎಂದು ಕರೆಯಲಾಗುವ ವೈಶಿಷ್ಟ್ಯವನ್ನು Internet Explorer 9 ಮತ್ತು 10 ಹೊಂದಿದ್ದು, ಇದು ಬಾಹ್ಯ ಸಂಸ್ಥೆ ಮಾಹಿತಿ ಸೇವಾದಾರರುಗಳಿಗೆ ನಿಮ್ಮ ಭೇಟಿಯ ಬಗ್ಗೆ ವಿವರಗಳನ್ನು ಸ್ವಯಂಚಾಲಿತವಾಗಿ ಕಳುಹಿಸದಂತೆ ವೆಬ್ ಸೈಟ್ಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ನೀವು ಅನುಸರಣೆಯ ರಕ್ಷಣಾ ಪಟ್ಟಿಯನ್ನು ಸೇರಿಸಿದಾಗ, ನಿರ್ಬಂಧಿಸಬೇಕಾದ ಸೈಟ್ ಎಂದು ಪಟ್ಟಿ ಮಾಡಲಾಗಿರುವ ಯಾವುದೇ ಸೈಟ್ನಿಂದ ಕುಕೀಗಳನ್ನು ಒಳಗೊಂಡು ಬಾಹ್ಯ ಸಂಸ್ಥೆಯ ಮಾಹಿತಿಯನ್ನು Internet Explorer ನಿರ್ಬಂಧಿಸುತ್ತದೆ. ಈ ಸೈಟ್ಗಳಿಗೆ ಕರೆಗಳನ್ನು ಮಿತಿಗೊಳಿಸುವ ಮೂಲಕ, ನಿಮ್ಮಿಂದ ಈ ಬಾಹ್ಯ ಸಂಸ್ಥೆ ಸೈಟ್ಗಳು ಸಂಗ್ರಹಿಸಬಹುದಾದ ಮಾಹಿತಿಯನ್ನು Internet Explorer ಮಿತಿಗೊಳಿಸುತ್ತದೆ. ನೀವು ಅನುಸರಣಾ ರಕ್ಷಣೆ ಪಟ್ಟಿಯನ್ನು ಕ್ರಿಯಾತ್ಮಕಗೊಳಿಸಿರುವಾಗ, ನೀವು ಭೇಟಿ ನೀಡುವ ಸೈಟ್ಗಳಿಗೆ ಅನುಸರಣೆಯ ನಿರಾಕರಣೆಯ ಸಂಕೇತವನ್ನು ಅಥವಾ ಆದ್ಯತೆಯನ್ನು Internet Explorer ಕಳುಹಿಸುತ್ತದೆ. ಹೆಚ್ಚುವರಿಯಾಗಿ, ನೀವು ಬಯಸಿದಲ್ಲಿ, Internet Explorer 10ನಲ್ಲಿ ನೀವು ಸ್ವತಂತ್ರವಾಗಿ DNTಯನ್ನು "off" ಅಥವಾ "on" ಮಾಡಬಹುದು. ಟ್ರ್ಯಾಕಿಂಗ್ ರಕ್ಷಣೆ ಪಟ್ಟಿಗಳು ಮತ್ತು ಟ್ರ್ಯಾಕ್ ಮಾಡಬೇಡ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು Internet Explorer ಗೌಪ್ಯತೆ ಹೇಳಿಕೆ ಅಥವಾ Internet Explorer ಸಹಾಯವನ್ನು ನೋಡಿ.
ವೈಯಕ್ತಿಕ ಜಾಹೀರಾತುಗೊಳಿಸುವಿಕೆ ಕಂಪನಿಗಳು ಸಹ ತಮ್ಮ ಸ್ವಂತ ಆಪ್ಟ್-ಔಟ್ ಸಾಮರ್ಥ್ಯಗಳನ್ನು ಜೊತೆಗೆ ಹೆಚ್ಚು ಸುಧಾರಿತ ಜಾಹೀರಾತುಗೊಳಿಸುವಿಕೆ ಆಯ್ಕೆಗಳನ್ನು ನೀಡಬಹುದು. ಉದಾಹರಣೆಗೆ, Microsoft ನ ಜಾಹೀರಾತು ಆದ್ಯತೆ ಮತ್ತು ಆಯ್ಕೆ-ಮಾಡದಿರುವ ನಿಯಂತ್ರಣಗಳು http://choice.live.com/advertisementchoice/ ನಲ್ಲಿ ಲಭ್ಯವಿದೆ. ಆಯ್ಕೆ ಮಾಡಿಕೊಳ್ಳದೇ ಇರುವುದು ಎಂದರೆ ನೀವು ಜಾಹೀರಾತುಗಳನ್ನು ಪಡೆದುಕೊಳ್ಳುವುದನ್ನು ನಿಲ್ಲಿಸುತ್ತೀರಿ ಅಥವಾ ಕೆಲವೇ ಜಾಹೀರಾತುಗಳನ್ನು ನೋಡುತ್ತೀರಿ ಎಂದು ಅರ್ಥವಲ್ಲ ಎಂಬುದನ್ನು ದಯವಿಟ್ಟು ಗಮನಿಸಿ; ಆದರೆ, ನೀವು ಆಯ್ಕೆ ಮಾಡಿಕೊಳ್ಳದಿದ್ದರೆ, ನೀವು ಸ್ವೀಕರಿಸುವ ಜಾಹೀರಾತುಗಳು ಇನ್ನು ಮುಂದೆ ನಡವಳಿಕೆಯುಕ್ತ ಗುರಿಪಡಿಸುವುದಿಲ್ಲ. ಜೊತೆಗೆ, ಹೀಗೆ ಮಾಡುವುದರಿಂದ ನಮ್ಮ ಸೇವೆಗಳಿಗೆ ಮಾಹಿತಿ ಹೋಗುವುದು ನಿಲ್ಲುವುದಿಲ್ಲ, ಅದು ವರ್ತನೆಯನ್ನಾಧರಿಸಿದ ಜಾಹೀರಾತುಗಳಿಗೆ ಬಳಸಬಹುದಾದ ಪ್ರೊಫೈಲುಗಳನ್ನು ಸೃಷ್ಟಿಸಲು ಅಥವಾ ನವೀಕರಿಸುವುದನ್ನು ನಿಲ್ಲಿಸಬಹುದು.
ವೆಬ್ ಬೀಕನ್ಗಳ ಬಳಕೆ
ವೆಬ್ ಬೀಕನ್ಗಳು ಎಂದು ಕರೆಯಲಾಗುವ ಎಲೆಕ್ಟ್ರಾನಿಕ್ ಇಮೇಜ್ಗಳನ್ನು Microsoft ವೆಬ್ ಪುಟಗಳು ಹೊಂದಿರುತ್ತದೆ - ಕೆಲವು ಬಾರಿ ಏಕ-ಪಿಕ್ಸಲ್ ಜಿಫ್ ಎಂದೂ ಕರೆಯಲಾಗುತ್ತದೆ - ಇವುಗಳನ್ನು ನಿಮ್ಮ ಸೈಟ್ಗಳಲ್ಲಿ ಕುಕೀಗಳನ್ನು ವಿತರಣೆ ಮಾಡಲು ಬಳಸಬಹುದು, ಈ ಪುಟಗಳಿಗೆ ಮತ್ತು ಸಹಯೋಗಿ-ಬ್ರಾಂಡೆಡ್ ಸೇವೆಗಳಿಗೆ ಭೇಟಿ ನೀಡಿದ ಬಳಕೆದಾರರನ್ನು ಇದೀಗ ಎಣಿಕೆ ಮಾಡೋಣ. ಸಂದೇಶಗಳನ್ನು ತೆರೆಯಲಾಗಿದೆಯೇ ಮತ್ತು ತೆರೆದಿದೆಯೆಂದು ನಿರ್ಣಯಿಸಲು ನಮ್ಮ ಪ್ರಚಾರದ ಇ-ಮೇಲ್ ಸಂದೇಶಗಳು ಅಥವಾ ಸುದ್ದಿಪತ್ರಗಳಲ್ಲಿ ನಾವು ವೆಬ್ ಬೀಕನ್ಗಳನ್ನು ಸೇರಿಸಿಕೊಳ್ಳಬಹುದು.
Microsoftನ ಸೈಟ್ ಒಂದರಲ್ಲಿರುವ ಜಾಹೀರಾತಿನ ಮೇಲೆ ಕ್ಲಿಕ್ ಮಾಡುವಿಕೆಯು ಜಾಹೀರಾತುದಾರರ ಸೈಟ್ನಲ್ಲಿ ಖರೀದಿ ಅಥವಾ ಇತರೆ ಚಟುವಟಿಕೆಗೆ ಎಷ್ಟರಮಟ್ಟಿಗೆ ಕಾರಣವಾಗಬಹುದು ಎಂಬುದರ ಬಗ್ಗೆ ಅಂಕಿಅಂಶಗಳನ್ನು ಕಂಡುಕೊಳ್ಳಲು Microsoft ಸೈಟ್ಗಳಲ್ಲಿ ಜಾಹೀರಾತನ್ನು ನೀಡುವ ಹಾಗೂ ತಮ್ಮ ಸೈಟ್ಗಳಲ್ಲಿ ಅಥವಾ ತಮ್ಮ ಜಾಹೀರಾತುಗಳಲ್ಲಿ ವೆಬ್ ಬೀಕನ್ಗಳನ್ನು ಅಳವಡಿಸುವ ಇತರ ಕಂಪೆನಿಗಳೊಂದಿಗೆ ನಾವು ಕಾರ್ಯನಿರ್ವಹಿಸಬಹುದು.
ಅಂತಿಮವಾಗಿ, ನಮ್ಮ ಪ್ರಚಾರಗಳು ಅಥವಾ ಇತರ ವೆಬ್ ಸೈಟ್ ಕಾರ್ಯಾಚರಣೆಗಳ ಪರಿಣಾಮಕಾರತ್ವಕ್ಕೆ ಸಂಬಂಧಿಸಿದಂತೆ ಸರಾಸರಿ ಅಂಕಿಅಂಶಗಳನ್ನು ಒಟ್ಟುಗೂಡಿಸಲು ನಮಗೆ ಸಹಾಯ ಮಾಡಲು ಮೂರನೇ ವ್ಯಕ್ತಿಗಳಿಂದ ವೆಬ್ ಬೀಕನ್ಗಳನ್ನು Microsoft ಸೈಟ್ಗಳು ಒಳಗೊಂಡಿರಬಹುದು. ವೆಬ್ ಬೀಕನ್ಗಳು ನಿಮ್ಮ ಕಂಪ್ಯೂಟರ್ನಲ್ಲಿ ಕುಕೀಯನ್ನು ಹೊಂದಿಸಲು ಅಥವಾ ಓದಲು ಮೂರನೇ ವ್ಯಕ್ತಿಗಳಿಗೆ ಅನುಮತಿಸಬಹುದು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಅಥವಾ ಪ್ರವೇಶಿಸಲು ನಮ್ಮ ಸೈಟ್ಗಳಲ್ಲಿ ವೆಬ್ ಬೀಕನ್ಗಳನ್ನು ಬಳಸದಂತೆ ಮೂರನೇ ವ್ಯಕ್ತಿಗಳನ್ನು ನಾವು ನಿಷೇಧಿಸಿದ್ದೇವೆ. ಏನೇ ಆದರೂ, ಈ ಮುಂದಿನ ಪ್ರತಿ ಅನಾಲಿಟಿಕ್ಸ್ ಪ್ರೊವೈಡರ್ಗಳಿಗೆ ಲಿಂಕ್ಗಳನ್ನು ಕ್ಲಿಕ್ ಮಾಡುವ ಮೂಲಕ ಈ ಮೂರನೇ-ವ್ಯಕ್ತಿ ಅನಾಲಿಟಿಕ್ಸ್ ಕಂಪನಿಗಳಿಂದ ಡೇಟಾ ಸಂಗ್ರಹಣೆ ಅಥವಾ ಬಳಕೆಯನ್ನು ಆಯ್ಕೆ ಮಾಡಿಕೊಳ್ಳದೇ ಇರಲು ನಿಮಗೆ ಸಾಧ್ಯವಾಗುತ್ತದೆ:
ಇತರ ಇಂತಹುದೇ ತಂತ್ರಜ್ಞಾನಗಳು
ಪ್ರಮಾಣಿತ ಕುಕೀಗಳು ಮತ್ತು ವೆಬ್ ಬೀಕನ್ಗಳ ಜೊತೆಗೆ, ನಿಮ್ಮ ಕಂಪ್ಯೂಟರ್ನಲ್ಲಿ ಡೇಟಾ ಫೈಲ್ಗಳನ್ನು ಸಂಗ್ರಹಿಸಲು ಮತ್ತು ಓದಲು ಇತರ ತಂತ್ರಜ್ಞಾನಗಳನ್ನು ವೆಬ್ ಸೈಟ್ಗಳು ಬಳಸಬಹುದು. ನಿಮ್ಮ ಆದ್ಯತೆಗಳನ್ನು ಕಾಪಾಡಿಕೊಳ್ಳಲು ಅಥವಾ ಸ್ಥಳೀಯವಾಗಿ ಕೆಲವು ಫೈಲ್ಗಳನ್ನು ಸಂಗ್ರಹಿಸುವ ಮೂಲಕ ವೇಗ ಮತ್ತು ಕಾರ್ಯನಿರ್ವಹಣೆಯನ್ನು ಸುಧಾರಿಸಲು ಇದನ್ನು ಮಾಡಬಹುದು. ಆದರೆ, ಪ್ರಮಾಣಿತ ಕುಕೀಗಳಂತೆಯೇ, ಇದನ್ನು ನಿಮ್ಮ ಕಂಪ್ಯೂಟರ್ಗಾಗಿ ಅನನ್ಯ ಗುರುತಿಸುವಿಕೆಯನ್ನು ಸಂಗ್ರಹಿಸಲೂ ಸಹ ಬಳಸಬಹುದು, ಇದನ್ನು ನಂತರ ನಡವಳಿಕೆಯನ್ನು ಟ್ರ್ಯಾಕ್ ಮಾಡಲು ಬಳಸಬಹುದು. ಈ ತಂತ್ರಜ್ಞಾನಗಳು ಸ್ಥಳೀಯ ಹಂಚಿಕ ವಸ್ತುಗಳನ್ನು (ಅಥವಾ "ಫ್ಲ್ಯಾಶ್ ಕುಕೀಗಳು") ಮತ್ತು ಸಿಲ್ವರ್ಲೈಟ್ ಅಪ್ಲಿಕೇಶನ್ ಸಂಗ್ರಹಣೆಯನ್ನು ಒಳಗೊಂಡಿರುತ್ತವೆ.
ಸ್ಥಳೀಯ ಹಂಚಿತ ವಸ್ತುಗಳು ಅಥವಾ "ಫ್ಲ್ಯಾಶ್ ಕುಕೀಗಳು". Adobe ಫ್ಲ್ಯಾಶ್ ತಂತ್ರಜ್ಞಾನವನ್ನು ಬಳಸುವ ವೆಬ್ ಸೈಟ್ಗಳು ನಿಮ್ಮ ಕಂಪ್ಯೂಟರ್ನಲ್ಲಿ ಡೇಟಾ ಸಂಗ್ರಹಣೆ ಮಾಡಲು ಸ್ಥಳೀಯ ಹಂಚಿತ ವಸ್ತುಗಳನ್ನು ಅಥವಾ "ಫ್ಲ್ಯಾಶ್ ಕುಕೀಗಳನ್ನು" ಬಳಸಬಹುದು. ಫ್ಲ್ಯಾಶ್ ಕುಕೀಗಳನ್ನು ತೆರವುಗೊಳಿಸುವ ಸಾಮರ್ಥ್ಯವು ಪ್ರಮಾಣಿತ ಕುಕೀಗಳಿಗೆ ನಿಮ್ಮ ಬ್ರೌಸರ್ನಿಂದ ನಿಯಂತ್ರಿಸಲಾಗಬಹುದು ಅಥವಾ ನಿಯಂತ್ರಿಸಲಾಗದೇ ಇರಬಹುದು ಏಕೆಂದರೆ ಇದು ಬ್ರೌಸರ್ನಿಂದ ಬ್ರೌಸರ್ಗೆ ಬದಲಾಗುತ್ತದೆ. ಫ್ಲ್ಯಾಶ್ ಕುಕೀಗಳನ್ನು ನಿರ್ವಹಿಸಲು ಅಥವಾ ನಿರ್ಬಂಧಿಸಲು, http://www.macromedia.com/support/documentation/en/flashplayer/help/settings_manager.html ಗೆ ಹೋಗಿ..
ಸಿಲ್ವರ್ಲೈಟ್ ಅಪ್ಲಿಕೇಶನ್ ಸಂಗ್ರಹಣೆ. Microsoft ಸಿಲ್ವರ್ಲೈಟ್ ತಂತ್ರಜ್ಞಾನವನ್ನು ಬಳಸುವ ವೆಬ್ ಸೈಟ್ಗಳು ಸಿಲ್ವರ್ಲೈಟ್ ಅಪ್ಲಿಕೇಶನ್ ಸಂಗ್ರಹಣೆಯನ್ನು ಬಳಸಿಕೊಂಡು ಡೇಟಾವನ್ನು ಸಂಗ್ರಹಿಸುವ ಸಾಮರ್ಥ್ಯವನ್ನೂ ಸಹ ಹೊಂದಿರುತ್ತವೆ. ಅಂತಹ ಸಂಗ್ರಹಣೆಯನ್ನು ಹೇಗೆ ನಿರ್ವಹಿಸುವುದು ಅಥವಾ ನಿರ್ಬಂಧಿಸುವುದು ಎಂಬ ಬಗ್ಗೆ ತಿಳಿಯಲು, Silverlight ಗೆ ಭೇಟಿ ನೀಡಿ.
ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮತ್ತು ನಿಮಗೆ ನಮ್ಮಿಂದ ಸಾಧ್ಯವಾಗುವ ಅತ್ಯುತ್ತಮ ಉತ್ಪನ್ನಗಳು ಸೇವೆಗಳು ಮತ್ತು ಅನುಭವಗಳನ್ನು ನೀಡಲು, ಹಲವು ಪ್ರಕಾರದ ಮಾಹಿತಿಯನ್ನು Microsoft ಸಂಗ್ರಹಿಸುತ್ತದೆ.
ನೀವು ನೋಂದಾಯಿಸಿದಾಗ, ಸೈನ್ ಇನ್ ಮಾಡಿದಾಗ ಮತ್ತು ನಮ್ಮ ಸೈಟ್ಗಳು ಮತ್ತು ಸೇವೆಗಳನ್ನು ಬಳಸಿದಾಗ ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಇತರ ಕಂಪನಿಗಳಿಂದ ಸಹ ನಾವು ಮಾಹಿತಿಯನ್ನು ಪಡೆದುಕೊಳ್ಳಬಹುದು.
ಈ ಮಾಹಿತಿಯನ್ನು ನಾವು ಜಾಲ ಮಾಹಿತಿ ನಮೂನೆಗಳಿಂದ, ಕುಕೀಸ್ ಮತ್ತು ಇತರ ತಂತ್ರಜ್ಞಾನಗಳಿಂದ, ಅಂತರ್ಜಾಲ ದಾಖಲೆಗಳಿಂದ ಮತ್ತು ನಿಮ್ಮ ಕಂಪ್ಯೂಟರಿನಲ್ಲಿ ಅಥವಾ ಇತರ ವಸ್ತುಗಳಲ್ಲಿರುವ ಸಾಫ್ಟ್ ವೇರುಗಳಿಂದ ಸಂಗ್ರಹಿಸುತ್ತೇವೆ.
ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮತ್ತು ನಮ್ಮಿಂದ ಸಾಧ್ಯವಾಗುವ ಅತ್ಯುತ್ತಮ ಉತ್ಪನ್ನಗಳು, ಸೇವೆಗಳು ಮತ್ತು ಅನುಭವವನ್ನು ನೀಡಲು ಹಲವು ಪ್ರಕಾರದ ಮಾಹಿತಿಯನ್ನು Microsoft ಸಂಗ್ರಹಿಸುತ್ತದೆ. ನೀವು ಈ ಕೆಲವು ಮಾಹಿತಿಯನ್ನು ನಮಗೆ ನೇರವಾಗಿ ಒದಗಿಸುತ್ತೀರಿ. ಇದರಲ್ಲಿ ಕೆಲವು ಮಾಹಿತಿಯನ್ನು ನೀವು ನಮ್ಮ ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ ಹೇಗೆ ಸಂವಹನ ಮಾಡುತ್ತೀರಿ ಎಂದು ಗಮನಿಸುವ ಮೂಲಕ ಪಡೆದುಕೊಳ್ಳುತ್ತೇವೆ. ಇನ್ನು ಕೆಲವು ಮಾಹಿತಿಗಳು ನಾವು ನೇರವಾಗಿ ಸಂಗ್ರಹಿಸುವ ಮಾಹಿತಿಯೊಂದಿಗೆ ನಾವು ಒಗ್ಗೂಡಿಸಬಹುದಾದ ಇತರ ಮೂಲಗಳಿಂದ ಲಭ್ಯವಿರುತ್ತವೆ. ಮೂಲವೇನೇ ಇದ್ದರೂ, ಈ ಮಾಹಿತಿಯನ್ನು ಕಾಳಜಿಯಿಂದ ಪರಿಗಣಿಸುವುದು ಮತ್ತು ನಿಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುವುದು ಮುಖ್ಯವೆಂದು ನಾವು ನಂಬುತ್ತೇವೆ.
ನಾವು ಏನನ್ನು ಸಂಗ್ರಹಿಸುತ್ತೇವೆ:
ನಾವು ಹೇಗೆ ಸಂಗ್ರಹಿಸುತ್ತೇವೆ:
ನಮ್ಮ ಸೈಟ್ಗಳು ಮತ್ತು ಈ ಕೆಳಗಿನ ಸೇವೆಗಳನ್ನು ನೀವು ಹೇಗೆ ಬಳಸುತ್ತೀರಿ ಎಂಬ ಕುರಿತು ಮಾಹಿತಿಯನ್ನು ಪಡೆಯಲು ನಾವು ಹಲವಾರು ರೀತಿಯ ವಿಧಾನಗಳು ಮತ್ತು ತಂತ್ರಜ್ಞಾನಗಳನ್ನು ಬಳಸುತ್ತೇವೆ:
ನಾವು ಸಂಗ್ರಹಿಸುವ ಮಾಹಿತಿಯನ್ನು ನಾವು ನೀಡುವ ಉತ್ಪನ್ನಗಳು ಮತ್ತು ಸೇವೆಗಳನ್ನು ನಿರ್ವಹಿಸಲು, ಸುಧಾರಿಸಲು ಮತ್ತು ವೈಯಕ್ತಿಕಗೊಳಿಸಲು Microsoft ಬಳಸುತ್ತದೆ.
ಈ ಮಾಹಿತಿಯನ್ನು ನಿಮ್ಮೊಂದಿಗೆ ಸಂವಹಿಸಲು ಕೂಡಾ ನಾವು ಬಳಸಬಹುದು, ಉದಾಹರಣೆಗೆ,ನಿಮ್ಮಖಾತೆಯ ಹಾಗೂ ಭದ್ರತಾ ನವೀಕರಣಗಳ ಬಗ್ಗೆ ಮಾಹಿತಿ ನೀಡುವುದು.
ಮತ್ತು ನೀವು ನಮ್ಮ ಜಾಹೀರಾತು-ಬೆಂಬಲಿತ ಸೇವೆಗಳಲ್ಲಿ ನೋಡುವ ಜಾಹೀರಾತುಗಳನ್ನು ಇನ್ನಷ್ಟು ಹೆಚ್ಚು ಪ್ರಸ್ತುತವಾಗಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಈ ಮಾಹಿತಿಯನ್ನು ನಾವು ಬಳಸಬಹುದು.
ನಾವು ಸಂಗ್ರಹಿಸುವ ಮಾಹಿತಿಯನ್ನು ನಾವು ನೀಡುವ ಉತ್ಪನ್ನಗಳು ಮತ್ತು ಸೇವೆಗಳನ್ನು ನಿರ್ವಹಿಸಲು, ಸುಧಾರಿಸಲು ಮತ್ತು ವೈಯಕ್ತಿಕಗೊಳಿಸಲು Microsoft ಬಳಸುತ್ತದೆ. ನಮ್ಮೊಂದಿಗಿನ ನಿಮ್ಮ ಸಂವಹನದಲ್ಲಿ ಹೆಚ್ಚು ಸುಸಂಗತವಾದ ಮತ್ತು ವೈಯಕ್ತಿಕಗೊಳಿಸಿದ ಅನುಭವವನ್ನು ಒದಗಿಸಲು ಒಂದು Microsoft ಸೇವೆಯ ಮೂಲಕ ಸಂಗ್ರಹಿಸಲಾದ ಮಾಹಿತಿಯನ್ನು ಇತರ Microsoft ಸೇವೆಗಳೊಂದಿಗೆ ಸಂಗ್ರಹಿಸಲಾದ ಮಾಹಿತಿಯೊಂದಿಗೆ ಒಗ್ಗೂಡಿಸಬಹುದು. ಹಾಗೆಯೇ ನಾವು ಇದನ್ನು ಇತರ ಕಂಪನಿಗಳ ಮಾಹಿತಿಯೊಂದಿಗೆ ಪೂರಕಗೊಳಿಸಬಹುದು. ಉದಾಹರಣೆಗೆ, ನಿಮ್ಮ IP ವಿಳಾಸವನ್ನು ಆಧರಿಸಿಕೊಂಡು ನಿಮ್ಮ ಭೌಗೋಳಿಕ ಪ್ರದೇಶಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಸೇವೆಗಳನ್ನು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಲು ಸಾಮಾನ್ಯವಾದ ಭೌಗೋಳಿಕ ಪ್ರದೇಶವನ್ನು ಪಡೆಯುವ ನಿಟ್ಟಿನಲ್ಲಿ ಸಹಾಯಕವಾಗುವಂತೆ ಇತರ ಕಂಪನಿಗಳ ಸೇವೆಯನ್ನು ನಾವು ಬಳಸಬಹುದು.
ನಿಮಗೆ ಒಂದು ಚಂದಾದಾರಿಕೆಯು ಯಾವಾಗ ಕೊನೆಗೊಳ್ಳುತ್ತಿದೆ ಎಂಬ ಮಾಹಿತಿ ನೀಡಲು, ಭದ್ರತಾ ನವೀಕರಣಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿಸಲು ಅಥವಾ ನಿಮ್ಮ ಖಾತೆಯನ್ನು ಸಕ್ರಿಯವಾಗಿಡಲು ನೀವು ಯಾವಾಗ ಕ್ರಮಗಳನ್ನು ತೆಗೆದುಕೊಳ್ಳಬೇಕು, ಮುಂತಾದವುಗಳನ್ನು ನಿಮಗೆ ತಿಳಿಸಲು ಈ ಮಾಹಿತಿಯನ್ನು ನಾವು ಬಳಸಬಹುದು.
ನಮ್ಮ ಹಲವು ಸೈಟ್ ಗಳು ಮತ್ತು ಸೇವೆಗಳನ್ನು Microsoft ಉಚಿತವಾಗಿ ಒದಗಿಸುತ್ತದೆ ಏಕೆಂದರೆ ಅವುಗಳು ಜಾಹೀರಾತುಗಳಿಂದ ಬೆಂಬಲಿಸಲ್ಪಟ್ಟಿರುತ್ತವೆ. ಈ ಸೇವೆಗಳು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಲು, ನೀವು ನೋಡುವ ಜಾಹೀರಾತುಗಳನ್ನು ನಿಮಗೆ ಹೆಚ್ಚು ಪ್ರಸ್ತುತವಾಗಿಸುವ ಮೂಲಕ ಅವುಗಳನ್ನು ಸುಧಾರಿಸಲು ಸಹಾಯವಾಗುವಂತೆ,ನಾವು ಸಂಗ್ರಹಿಸುವ ಮಾಹಿತಿಯನ್ನು ಬಳಸಬಹುದು.
ಈ ಗೌಪ್ಯತಾ ಹೇಳಿಕೆಯಲ್ಲಿ ವಿವರಿಸಿರುವುದನ್ನು ಹೊರತುಪಡಿಸಿ, ನಿಮ್ಮ ಸಮ್ಮತಿಯಿಲ್ಲದೇ ಮೂರನೇ ವ್ಯಕ್ತಿಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಬಹಿರಂಗಪಡಿಸುವುದಿಲ್ಲ.
ದಯವಿಟ್ಟು ಗಮನಿಸಿ ಇತರ ಪ್ರಮುಖ ಗೌಪ್ಯತಾ ಮಾಹಿತಿ Microsoftನ ಅಂಗಸಂಸ್ಥೆಗಳು ಮತ್ತು ಮಾರಾಟಗಾರರಿಗೂ ಸೇರಿದಂತೆ ನಾವು ಯಾವಾಗ ಮಾಹಿತಿಯನ್ನು ಬಹಿರಂಗಪಡಿಸಬಹುದೆಂದರೆ; ಕಾನೂನಿಗೆ ಅಗತ್ಯವಿದ್ದಾಗ ಅಥವಾ ಕಾನೂನು ಪ್ರಕ್ರಿಯೆಗೆ ಪ್ರತಿಕ್ರಿಯಿಸಲು ಮೋಸವನ್ನು ಎದುರಿಸಲು ಅಥವಾ ನಮ್ಮ ಹಿತಾಸಕ್ತಿಯನ್ನು ರಕ್ಷಿಸಲು; ಅಥವಾ ಜೀವಗಳನ್ನು ರಕ್ಷಿಸಲು.
ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ಅಥವಾ ಬಹಿರಂಗಪಡಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕೆಲವು Microsoft ಸೇವೆಗಳು ನಿಮಗೆ ಆನ್ ಲೈನ್ ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ವೀಕ್ಷಿಸುವ ಮತ್ತು ಬದಲಾಯಿಸುವ ಸಾಮರ್ಥ್ಯವನ್ನು ನೀಡುತ್ತವೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಇತರರು ವೀಕ್ಷಿಸುವುದನ್ನು ತಡೆಯಲು, ನೀವು ಮೊದಲು ಸೈನ್ ಇನ್ ಮಾಡಬೇಕಾಗುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿಪುಟವನ್ನು ನೀವು ಹೇಗೆ ಪ್ರವೇಶಿಸುತ್ತೀರಿ ಎನ್ನುವುದು, ನೀವು ಯಾವ ಸೈಟ್ ಗಳು ಮತ್ತು ಸೇವೆಗಳನ್ನು ಬಳಸುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.
Microsoft.com - Microsoft.com ಪ್ರೊಫೈಲ್ ಸೆಂಟರ್ ಗೆ ಭೇಟಿ ನೀಡುವ ಮೂಲಕ ನೀವು Microsoft.com ನಲ್ಲಿ ನಿಮ್ಮ ಪ್ರೊಫೈಲ್ ಪ್ರವೇಶಿಸಬಹುದು ಮತ್ತು ಅದನ್ನು ನವೀಕರಿಸಬಹುದು Microsoft.com ಪ್ರೊಫೈಲ್.
Microsoft ಬಿಲ್ಲಿಂಗ್ ಮತ್ತು ಖಾತೆ ಸೇವೆಗಳು - ನಿಮ್ಮ ಬಳಿ Microsoft ಬಿಲ್ಲಿಂಗ್ ಖಾತೆ ಇದ್ದಲ್ಲಿ, "ವೈಯಕ್ತಿಕ ಮಾಹಿತಿ" ಅಥವಾ" ಬಿಲ್ಲಿಂಗ್ ಮಾಹಿತಿ" ಕೊಂಡಿಯನ್ನು ಕ್ಲಿಕ್ ಮಾಡುವ ಮೂಲಕ, Microsoft ಬಿಲ್ಲಿಂಗ್ ವೆಬ್ ಸೈಟ್ ನಲ್ಲಿ ನಿಮ್ಮ ಮಾಹಿತಿಯನ್ನು ನವೀಕರಿಸಬಹುದು.
Microsoft Connect - ನೀವು Microsoft Connectನ ನೋಂದಾಯಿತ ಬಳಕೆದಾರರಾಗಿದ್ದಲ್ಲಿ, Microsoft Connect ವೆಬ್ ಸೈಟ್ ನಲ್ಲಿ ಕನೆಕ್ಟ್ ಪ್ರೊಫೈಲ್ ನಿರ್ವಹಿಸಿಎಂಬುದನ್ನು ಕ್ಲಿಕ್ ಮಾಡುವ ಮೂಲಕ, ನಿಮ್ಮ ವೈಯಕ್ತಿಕ ಮಾಹಿತಿಪುಟವನ್ನು ಪ್ರವೇಶಿಸಬಹುದು ಮತ್ತು ಅದನ್ನು ಬದಲಾಯಿಸಬಹುದು.
Windows Live - ನೀವು Windows Live ಸೇವೆಗಳನ್ನು ಬಳಸಿದ್ದರೆ, Windows Live ಖಾತೆ ಸೇವೆಗಳನ್ನು ಸಂದರ್ಶಿಸುವ ಮೂಲಕ, ನೀವು ನಿಮ್ಮ ಪ್ರೊಫೈಲ್ ಮಾಹಿತಿ ನವೀಕರಿಸಬಹುದು, ನಿಮ್ಮ ಪಾಸ್ವರ್ಡ್ ಬದಲಿಸಬಹುದು, ನಿಮ್ಮ ರುಜುವಾತುಗಳೊಂದಿಗೆ ಸಂಯೋಜಿತವಾಗಿರುವ ಅನನ್ಯ ಐಡಿ ವೀಕ್ಷಿಸಬಹುದು ಅಥವಾ ನಿರ್ದಿಷ್ಟ ಖಾತೆಗಳನ್ನು ಮುಚ್ಚಬಹುದು ಖಾತೆಗಳನ್ನು ಮುಚ್ಚಬಹುದು.
Windows Live ಸಾರ್ವಜನಿಕ ಪ್ರೊಫೈಲ್ - ನೀವು Windows Live ನಲ್ಲಿ ಸಾರ್ವಜನಿಕ ಪ್ರೊಫೈಲ್ ಸೃಷ್ಟಿಸಿದ್ದರೆ, Windows Live ಪ್ರೊಫೈಲ್ ಗೆ ಹೋಗುವ ಮೂಲಕ ನಿಮ್ಮ ಸಾರ್ವಜನಿಕ ಪ್ರೊಫೈಲ್ ನ ಮಾಹಿತಿಗಳನ್ನು ಅಳಿಸಬಹುದು ಅಥವಾ ಬದಲಾಯಿಸಬಹುದು.
ಜಾಹೀರಾತು ಶೋಧನೆ - ನೀವು Microsoft ಜಾಹೀರಾತು ಮೂಲಕ, ಜಾಹೀರಾತು ಶೋಧನೆ ಖರೀದಿಸಿದ್ದಲ್ಲಿ, Microsoft adCenter ವೆಬ್ ಸೈಟ್ ನಲ್ಲಿ ನೀವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸಬಹುದು ಮತ್ತು ಬದಲಾಯಿಸಬಹುದು.
Microsoft ಪಾಲುಗಾರಿಕಾ ಕಾರ್ಯಕ್ರಮ - ನೀವು Microsoft ಪಾಲುಗಾರಿಕಾ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡಿದ್ದರೆ, ಪಾಲುಗಾರಿಕಾ ಕಾರ್ಯಕ್ರಮದ ವೈಬ್ ಸೈಟ್ ನಲ್ಲಿ ನಿಮ್ಮ ಖಾತೆ ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಪ್ರೊಫೈಲ್ ಅನ್ನು ಪರಿಶೀಲಿಸಬಹುದು ಮತ್ತು ಬದಲಾಯಿಸಬಹುದು.
Xbox - ನೀವು Xbox LIVE ಅಥವಾ Xbox.com ಬಳಕೆದಾರರಾಗಿದ್ದಲ್ಲಿ, Xbox 360 console ಅಥವಾ Xbox.com ವೈಬ್ ಸೈಟ್ ನಲ್ಲಿ My Xboxಪ್ರವೇಶಿಸಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ವೀಕ್ಷಿಸಬಹುದು, ಹಾಗೂ ಬಿಲ್ಲಿಂಗ್ ಖಾತೆ ವಿವರ ಖಾಸಗಿ ವಾತಾವರಣ ಆನ್ ಲೈನ್ ಸುರಕ್ಷತೆ ಮತ್ತು ಮಾಹಿತಿ ಹಂಚಿಕೆ ಆದ್ಯತೆಗಳೂ ಸೇರಿದಂತೆ ಹಲವು ವಿವರಗಳನ್ನು ಬದಲಾಯಿಸಬಹುದು. ಖಾತೆ ಮಾಹಿತಿಗಾಗಿ ನನ್ನ Xbox, ಖಾತೆಗಳು ಆಯ್ಕೆಮಾಡಿ. ಇತರ ವೈಯಕ್ತಿಕ ಮಾಹಿತಿ ಸೆಟ್ಟಿಂಗ್ಗಳಿಗೆ, ನನ್ನ Xbox ಆಯ್ಕೆಮಾಡಿ, ನಂತರ ಪ್ರೊಫೈಲ್, ತದನಂತರ ಆನ್ಲೈನ್ ಭದ್ರತಾ ಸೆಟ್ಟಿಂಗ್ಗಳನ್ನು ಆಯ್ಕೆಮಾಡಿ.
Zune - ನಿಮ್ಮ ಬಳಿ Zune ಖಾತೆ ಅಥವಾ Zune Pass ಚಂದಾದಾರಿಕೆ ಇದ್ದಲ್ಲಿ Zune.net ನಲ್ಲಿ (ಸೈನ್ ಇನ್ ಮಾಡಿ,ನಿಮ್ಮ Zune tag ಪ್ರವೇಶಿಸಿ,ಬಳಿಕ ನನ್ನ ಖಾತೆ ಕ್ಲಿಕ್ ಮಾಡಿ), ಅಥವಾ Zune ಸಾಫ್ಟ್ ವೇರ್ (ಸೈನ್ ಇನ್ ಮಾಡಿ,ನಿಮ್ಮ Zune tag ಪ್ರವೇಶಿಸಿ,ಬಳಿಕ Zune.net ಪ್ರೊಫೈಲ್ ಕ್ಲಿಕ್ ಮಾಡಿ) ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ವೀಕ್ಷಿಸಬಹುದು ಮತ್ತು ಬದಲಾಯಿಸಬಹುದು.
ಮೇಲಿನ ಕೊಂಡಿ ಮೂಲಕ Microsoft ಸೈಟ್ಗಳು ಅಥವಾ ಸೇವೆಗಳು ಸಂಗ್ರಹಿಸಿದ ವೈಯಕ್ತಿಕ ಮಾಹಿತಿಪುಟವನ್ನುನಿಮಗೆ ಪ್ರವೇಶಿಸಲಾಗದಿದ್ದರೆ ಈ ಸೈಟ್ಗಳು ಮತ್ತು ಸೇವೆಗಳು ನಿಮ್ಮ ಮಾಹಿತಿಪುಟವನ್ನು ಪ್ರವೇಶಿಸುವ ಇತರ ವಿಧಾನಗಳನ್ನು ನಿಮಗೆ ಒದಗಿಸಬಹುದು. ವೆಬ್ ಫಾರ್ಮ್ ಬಳಸುವ ಮೂಲಕ ನೀವು Microsoft ಅನ್ನು ಸಂಪರ್ಕಿಸಬಹುದು. ನಿಮ್ಮ ವೈಯಕ್ತಿಕ ಮಾಹಿತಿಪುಟವನ್ನು ಪ್ರವೇಶಿಸುವ ಅಥವಾ ಅಳಿಸುವ ವಿನಂತಿಗಳಿಗೆ, ನಾವು 30 ದಿನಗಳ ಒಳಗೆ ಸ್ಪಂದಿಸುತ್ತೇವೆ.
Microsoft ಸೈಟ್ ಅಥವಾ ಸೇವೆಯು ವಯಸ್ಸಿನ ಮಾಹಿತಿಯನ್ನು ಸಂಗ್ರಹಿಸುವಾಗ, 13 ಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರನ್ನು ನಿರ್ಬಂಧಿಸುತ್ತದೆ ಅಥವಾ ಮಕ್ಕಳು ಅದನ್ನು ಬಳಸುವ ಮೊದಲು, ಅವರ ಪಾಲಕರು ಅಥವಾ ಪೋಷಕರಿಂದ ಸಮ್ಮತಿಯನ್ನು ಪಡೆದುಕೊಳ್ಳುತ್ತದೆ.
ಸಮ್ಮತಿ ನೀಡಿದ ಬಳಿಕ, ಮಗುವಿನ ಖಾತೆಯನ್ನು ಇತರ ಯಾವುದೇ ಖಾತೆಯ ರೀತಿಯಲ್ಲೇ ಇತರ ಬಳಕೆದಾರರೊಂದಿಗೆ ಸಂವಹಿಸಲು ಸಾಧ್ಯವಾಗುವುದನ್ನೂ ಒಳಗೊಂಡಂತೆ, ಪರಿಗಣಿಸಲಾಗುತ್ತದೆ.
ಪೋಷಕರು ಗೌಪ್ಯತೆ ಹೇಳಿಕೆಯಲ್ಲಿ ವಿವರಿಸಿದಂತೆ, ಸಮ್ಮತಿಯನ್ನು ಬದಲಾಯಿಸಬಹುದು ಅಥವಾ ಹಿಂತೆಗೆದುಕೊಳ್ಳಬಹುದು.
Microsoft ಸೈಟ್ ಅಥವಾ ಸೇವೆಯು, ವಯಸ್ಸಿನ ಮಾಹಿತಿಯನ್ನು ಸಂಗ್ರಹಿಸಿದಾಗ, ಅದು ಒಂದೋ 13 ಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರನ್ನು ನಿರ್ಬಂಧಿಸುತ್ತದೆ ಅಥವಾ ಅವರು ಅದನ್ನು ಬಳಸುವ ಮೊದಲು. ಸೇವೆಯನ್ನು ಒದಗಿಸಲು ನಾವು ತಿಳಿದೂ ತಿಳಿದೂ 13 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚು ಮಾಹಿತಿಯನ್ನು ಒದಗಿಸುವಂತೆ ಕೇಳುವುದಿಲ್ಲ.
ಸಮ್ಮತಿಯನ್ನು ನೀಡಿದಾಗ, ಮಗುವಿನ ಖಾತೆಯನ್ನು ಇತರ ಯಾವುದೇ ಖಾತೆಯ ರೀತಿಯಲ್ಲಿಯೇ ಪರಿಗಣಿಸಲಾಗುತ್ತದೆ. ಮಗುವು, ಇ-ಮೇಲ್ ಶೀಘ್ರ ಸಂದೇಶ ಮತ್ತು ಆನ್ಲೈನ್ ಸಂದೇಶ ಬೋರ್ಡ್ಗಳಂತಹ ಸಂವಹನ ಹೊಂದಬಹುದು ಮತ್ತು ಎಲ್ಲಾ ವಯಸ್ಸಿನ ಇತರ ಬಳಕೆದಾರರೊಂದಿಗೆ ಮುಕ್ತವಾಗಿ ಸಂವಹನ ಮಾಡಲು ಸಾಧ್ಯವಾಗಬಹುದು.
ಪೋಷಕರು ಈ ಹಿಂದೆ ಮಾಡಿದ ಅಂಗೀಕಾರ ಆಯ್ಕೆಗಳನ್ನು ಬದಲಾಯಿಸಬಹುದು ಅಥವಾ ರದ್ದುಪಡಿಸಬಹುದು, ಮತ್ತು ಅವರ ಮಗುವಿನ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸಬಹುದು ಅಥವಾ ಅಳಿಸುವಂತೆ ಕೋರಬಹುದು. ಉದಾಹರಣೆಗಾಗಿ, Windows Live ನಲ್ಲಿ, ಪೋಷಕರು ತಮ್ಮ ಖಾತೆಗೆ ಭೇಟಿ ನೀಡಬಹುದು ಮತ್ತು "ಪೋಷಕರ ಅನುಮತಿಗಳು" ಮೇಲೆ ಕ್ಲಿಕ್ ಮಾಡಬಹುದು ಹೆತ್ತವರ ಅನುಮತಿ.
Microsoft ಸೈಟ್ಗಳು ಮತ್ತು ಸೇವೆಗಳಲ್ಲಿನ ಬಹುಪಾಲು ಆನ್ಲೈನ್ ಜಾಹೀರಾತುಗಳನ್ನು Microsoft ಜಾಹೀರಾತು ಪ್ರದರ್ಶಿಸುತ್ತದೆ. ನಿಮಗೆ ಆನ್ ಲೈನ್ ಜಾಹೀರಾತು ಪ್ರದರ್ಶಿಸುವಾಗ ನಾವು ಒಂದು ಅಥವಾ ಹೆಚ್ಚು ಕುಕೀಸ್ ಇಡುತ್ತೇವೆ. ಜಾಹೀರಾತು ಪ್ರದರ್ಶಿಸುವಾಗ ನಿಮ್ಮ ಕಂಪ್ಯೂಟರನ್ನು ಗುರುತಿಸುವುದು ಇದರ ಉದ್ದೇಶ. ಸಮಯ ಸರಿದ ಹಾಗೆ, ನಾವು ಜಾಹೀರಾತುಗಳನ್ನು ನೀಡುವ ಸೈಟ್ಗಳಿಂದ ನಾವು ಮಾಹಿತಿಯನ್ನು ಸಂಗ್ರಹಿಸಲೂ ಬಹುದು ಮತ್ತು ಮಾಹಿತಿಯನ್ನು ಹೆಚ್ಚು ಸೂಕ್ತವಾದ ಜಾಹೀರಾತುಗಳನ್ನು ಒದಗಿಸಲು ಬಳಸಬಹುದು.
ನಮ್ಮ ಆಪ್ಟ್ ಔಟ್ ಪುಟ ಕ್ಕೆ ಭೇಟಿ ನೀಡುವ ಮೂಲಕ ನೀವು Microsoft ಜಾಹೀರಾತಿನಿಂದ ಉದ್ದೇಶಿತ ಜಾಹೀರಾತುಗಳನ್ನು ಸ್ವೀಕರಿಸದಂತೆ ಆಯ್ಕೆಮಾಡಿಕೊಳ್ಳಬಹುದು.
ನಮ್ಮ ಹಲವು ವೆಬ್ ಸೈಟ್ಗಳು ಮತ್ತು ಆನ್ಲೈನ್ ಸೇವೆಗಳು ಜಾಹೀರಾತಿನಿಂದ ಬೆಂಬಲಿಸಲ್ಪಡುತ್ತವೆ.
Microsoft ಸೈಟ್ಗಳು ಮತ್ತು ಸೇವೆಗಳಲ್ಲಿನ ಬಹುಪಾಲು ಆನ್ಲೈನ್ ಜಾಹೀರಾತುಗಳನ್ನು Microsoft ಜಾಹೀರಾತು ಪ್ರದರ್ಶಿಸುತ್ತದೆ. ನಾವು ಆನ್ ಲೈನ್ ಜಾಹೀರಾತುಗಳನ್ನು ಪ್ರದರ್ಶಿಸುವಾಗ ನಿಮ್ಮ ಕಂಪ್ಯೂಟರಿನಲ್ಲಿ ಒಂದು ಅಥವಾ ಹೆಚ್ಚು ಉಳಿಯುವಂತಹಕುಕೀಸ್ಅನ್ನು ಪ್ರತಿ ಸಲ ಜಾಹೀರಾತು ಪ್ರದರ್ಶಿಸುವಾಗ ನಿಮ್ಮ ಕಂಪ್ಯೂಟರನ್ನು ಗುರುತಿಸಲಿಕ್ಕೋಸ್ಕರ ಇಡುತ್ತೇವೆ. ನಾವು ನಮ್ಮ ಸ್ವಂತ ವೆಬ್ಸೈಟ್ಗಳ ಜೊತೆಗೆ ಜಾಹೀರಾತು ಮತ್ತು ಪ್ರಕಾಶಕ ಪಾಲುದಾರರ ಸೈಟ್ಗಳಲ್ಲೂ ಜಾಹೀರಾತುಗಳನ್ನು ನೀಡುವುದರಿಂದ, ನೀವು ಅಥವಾ ನಿಮ್ಮ ಕಂಪ್ಯೂಟರ್ ಅನ್ನು ಬಳಸುತ್ತಿರುವ ಇತರರು ಭೇಟಿ ನೀಡಿದ ಅಥವಾ ವೀಕ್ಷಿಸಿದ ಪುಟಗಳ ಪ್ರಕಾರಗಳು, ವಿಷಯ ಮತ್ತು ಜಾಹೀರಾತುಗಳ ಬಗ್ಗೆ ಸಮಯ ಸರಿದಂತೆ ಮಾಹಿತಿಯನ್ನು ಒಟ್ಟುಗೂಡಿಸಲು ನಮಗೆ ಸಾಧ್ಯವಾಗುತ್ತದೆ. ಈ ಮಾಹಿತಿಯನ್ನು ಹಲವು ಉದ್ದೇಶಗಳಿಗೆ ಬಳಸಲಾಗುತ್ತದೆ, ಉದಾಹರಣೆಗಾಗಿ, ನೀವು ಒಂದೇ ಜಾಹೀರಾತುಗಳನ್ನು ಮತ್ತೆ ಮತ್ತೆ ನೋಡದಿರುವಂತೆ ಖಾತ್ರಿ ಪಡಿಸಿಕೊಳ್ಳುವುದಕ್ಕೆ ಇದು ನಮಗೆ ಸಹಾಯ ಮಾಡುತ್ತದೆ. ಹಾಗೆಯೇ ಈ ಮಾಹಿತಿಯನ್ನು ನಿಮಗೆ ಆಸಕ್ತಿದಾಯಕವೆಂದು ನಾವು ಭಾವಿಸುವ ಉದ್ದೇಶಿತ ಜಾಹೀರಾತುಗಳನ್ನು ಆಯ್ಕೆಮಾಡಲು ಮತ್ತು ಪ್ರದರ್ಶಿಸಲು ಸಹಾಯವಾಗುವಂತೆ ಬಳಸುತ್ತೇವೆ.
ನಮ್ಮ ಆಪ್ಟ್ ಔಟ್ ಪುಟ ಕ್ಕೆ ಭೇಟಿ ನೀಡುವ ಮೂಲಕ ನೀವು Microsoft ಜಾಹೀರಾತಿನಿಂದ ಉದ್ದೇಶಿತ ಜಾಹೀರಾತುಗಳನ್ನು ಸ್ವೀಕರಿಸದಂತೆ ಆಯ್ಕೆಮಾಡಿಕೊಳ್ಳಬಹುದು. Microsoft ಮೈಕ್ರೋಸಾಫ್ಟ್ ಜಾಹೀರಾತು ಹೇಗೆ ಮಾಹಿತಿಯನ್ನು ಸಂಗ್ರಹಿಸಿ ಉಪಯೋಗಿಸುತ್ತದೆಂಬ ಬಗ್ಗೆ ಹೆಚ್ಚಿನ ಮಾಹಿತಿಗಾಗಿ Microsoft ಜಾಹೀರಾತು ಗೌಪ್ಯತೆ ವಿವರಣೆಯನ್ನು ನೋಡಿರಿ.
ನಮ್ಮ ಸೈಟ್ಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ಇತರ ಜಾಹೀರಾತು ಜಾಲಗಳೂ ಸೇರಿದಂತೆ ನಾವು ಮೂರನೇ-ವ್ಯಕ್ತಿ ಜಾಹೀರಾತು ಕಂಪನಿಗಳಿಗೆ ಅನುಮತಿ ನೀಡುತ್ತೇವೆ. ಕೆಲವೊಂದು ಸಂದರ್ಭಗಳಲ್ಲಿ, ಈ ಮೂರನೇ ವ್ಯಕ್ತಿಗಳು ನಿಮ್ಮ ಕಂಪ್ಯೂಟರ್ನಲ್ಲಿ ಕುಕೀಗಳನ್ನೂ ಸಹ ಇರಿಸಬಹುದು. ಈ ಕಂಪನಿಗಳು ಪ್ರಸ್ತುತ ಈ ಕೆಳಗಿನವುಗಳನ್ನು ಒಳಗೊಂಡಿವೆ, ಆದರೆ ಕೇವಲ ಇವುಗಳಿಗೆ ಸೀಮಿತವಾಗಿರುವುದಿಲ್ಲ: 24/7 Real Media, adblade, AdConion, AdFusion, Advertising.com, AppNexus, Bane Media, Brand.net, CasaleMedia, Collective Media, InMobi, Interclick, Jumptap, Millennial Media, nugg.adAG, Mobclix, Mojiva, SpecificMedia, Tribal Fusion, ValueClick, Where.com, Yahoo!, YuMe, Zumobi. ಈ ಕಂನಿಗಳು ಅವುಗಳ ಕುಕೀ-ಆಧರಿತ ಉದ್ದೇಶಿತ ಜಾಹೀರಾತಿನ ಸ್ವೀಕೃತಿಯಿಂದ ಹೊರಬರಲು ನಿಮಗೆ ಮಾರ್ಗವನ್ನು ನೀಡಬಹುದು. ಮೇಲಿನ ಕಂಪೆನಿಗಳ ಹೆಸರುಗಳ ಮೇಲೆ ಕ್ಲಿಕ್ ಮಾಡಿ ಪ್ರತಿ ಕಂಪೆನಿಯ ವೆಬ್ಸೈಟ್ ಲಿಂಕ್ಗಳನ್ನು ಅನುಸರಿಸುವ ಮೂಲಕ ಹೆಚ್ಚಿನ ಮಾಹಿತಿಯನ್ನು ನೀವು ಕಂಡುಕೊಳ್ಳಬಹುದು. ಇವುಗಳಲ್ಲಿ ಹಲವು ಕಂಪೆನಿಗಳು ನೆಟ್ ವರ್ಕ್ ಅಡ್ವರ್ಟೈಸಿಂಗ್ ಇನಿಶಿಯೇಟಿವ್ ಅಥವಾಡಿಜಿಟಲ್ ಅಡ್ವರ್ಟೈಸಿಂಗ್ ಅಲಯನ್ಸ್ ನ, ಸದಸ್ಯರಾಗಿವೆ ಈ ಎರಡು ಗುಂಪುಗಳು ಭಾಗವಹಿಸುವ ಕಂಪೆನಿಗಳ ಉದ್ದೇಶಿತ ಜಾಹೀರಾತಿನಿಂದ ಹೊರಬರಲು ಸರಳ ದಾರಿಯನ್ನು ತೋರಿಸುತ್ತವೆ.
ನೀವು ಸ್ವೀಕರಿಸಿದ ಇ-ಮೇಲ್ನಲ್ಲಿರುವ ನಿರ್ದಿಷ್ಟ ಸೂಚನೆಗಳನ್ನು ಅನುಸರಿಸುವುದರ ಮೂಲಕ Microsoft ಸೈಟ್ಗಳು ಅಥವಾ ಸೇವೆಗಳಿಂದ ಭವಿಷ್ಯದ ಪ್ರಚಾರದ ಇ-ಮೇಲ್ ಸ್ವೀಕರಿಸುವುದನ್ನು ನಿಲ್ಲಿಸಬಹುದು. ಅನುಕ್ರಮ ಸೇವೆಯನ್ನು ಆಧರಿಸಿ, ನೀವು ಸಹ ನಿರ್ದಿಷ್ಟ Microsoft ಸೈಟ್ಗಳು ಅಥವಾ ಸೇವೆಗಳಿಗೆ ಪ್ರಚಾರದ ಇ-ಮೇಲ್, ದೂರವಾಣಿ ಕರೆಗಳು ಮತ್ತು ಪೋಸ್ಟಲ್ ಮೇಲ್ ಸ್ವೀಕೃತಿಯ ಬಗ್ಗೆ ಸ್ವತಃ ಆರಿಸುವಿಕೆಗಳನ್ನು ಮಾಡುವ ಆಯ್ಕೆಯನ್ನೂ ಸಹ ಹೊಂದಿರಬಹುದು
ಒಂದು ವೇಳೆ ನೀವು ನಮ್ಮಿಂದ ಪ್ರಚಾರ ಇ-ಮೇಲ್ಗಳನ್ನು ಸ್ವೀಕರಿಸಿದರೆ ಮತ್ತು ಭವಿಷ್ಯದಲ್ಲಿ ಅವುಗಳನ್ನು ಪಡೆಯುವುದನ್ನು ನಿಲ್ಲಿಸಲು ಬಯಸಿದರೆ, ಈ ಸಂದೇಶದಲ್ಲಿ ನಿರ್ದೇಶನಗಳನ್ನು ಅನುಸರಿಸುವ ಮೂಲಕ ನೀವು ಹಾಗೆ ಮಾಡಬಹುದು.
ಅನುಕ್ರಮ ಸೇವೆಯನ್ನು ಆಧರಿಸಿ, ನೀವು ಸಹ ನಿರ್ದಿಷ್ಟ Microsoft ಸೈಟ್ಗಳು ಅಥವಾ ಸೇವೆಗಳಿಂದ ಪ್ರಚಾರದ ಇ-ಮೇಲ್, ದೂರವಾಣಿ ಕರೆಗಳು ಮತ್ತು ಪೋಸ್ಟಲ್ ಮೇಲ್ ಸ್ವೀಕೃತಿಯ ಬಗ್ಗೆ ಸ್ವತಃ ಆರಿಸುವಿಕೆಯನ್ನು ಮಾಡುವ ಆಯ್ಕೆಯನ್ನೂ ಸಹ ಮುಂದಿನ ಪುಟಗಳಿಗೆ ಭೇಟಿ ನೀಡುವ ಮತ್ತು ಸೈನ್ ಇನ್ ಮಾಡುವ ಮೂಲಕ ಮಾಡಬಹುದು:
ಈ ಆಯ್ಕೆಗಳು ಆನ್ಲೈನ್ ಜಾಹೀರಾತು ಪ್ರದರ್ಶನಕ್ಕೆ ಅನ್ವಯಿಸುವುದಿಲ್ಲ: ಈ ವಿಷಯದ ಕುರಿತು ಮಾಹಿತಿಗಾಗಿ "ಜಾಹೀರಾತಿನ ಪ್ರದರ್ಶನ (ಆಯ್ಕೆ ಮಾಡಿಕೊಳ್ಳದಿರುವುದು)" ವಿಭಾಗವನ್ನು ದಯವಿಟ್ಟು ಉಲ್ಲೇಖ ಮಾಡಿ. ನೀವು ಸೇವೆಯನ್ನು ರದ್ದು ಗೊಳಿಸದೆ ನಿರ್ದಿಷ್ಟ Microsoft ಸೇವೆಗಳ ಭಾಗವಾಗಿ ನಿರ್ಧರಿಸಿದ ಕಡ್ಡಾಯ ಸೇವೆ ಸಂವಹನಗಳ ಪಡೆಯುದಕ್ಕೆ ಅವರು ಅನ್ವಯಿಸುವುದಿಲ್ಲ.
Microsoft ಖಾತೆ (ಈ ಹಿಂದೆ Windows Live ID ಮತ್ತು Microsoft Passport ಎಂದು ಕರೆಯಲ್ಪಡುತ್ತಿದ್ದ) ನಿಮಗೆ Microsoft ಉತ್ಪನ್ನಗಳು, ವೆಬ್ ಸೈಟ್ಗಳು ಮತ್ತು ಸೇವೆಗಳಿಗೆ ಹಾಗೂ ಆಯ್ದ Microsoft ಪಾಲುದಾರರಿಗೆ ಸೈನ್ ಇನ್ ಮಾಡಲು ಅವಕಾಶವನ್ನು ನೀಡುತ್ತದೆ. ನೀವು Microsoft ಖಾತೆಯೊಂದನ್ನು ಸೃಷ್ಟಿಸಿದಾಗ, ಕೆಲವು ಮಾಹಿತಿಯನ್ನು ಒದಗಿಸುವಂತೆ ನಾವು ನಿಮ್ಮನ್ನು ಕೇಳುತ್ತೇವೆ. ನಿಮ್ಮ Microsoft ಖಾತೆಯನ್ನು ಬಳಸಿ ನೀವು ಯಾವುದಾದರೋ ಸೈಟ್ ಅಥವಾ ಸೇವೆಗೆ ಸೈನ್ ಇನ್ ಮಾಡಿದಾಗ, ನಿಮ್ಮನ್ನು ದುರುದ್ದೇಶಪೂರಿತ ಖಾತೆ ಬಳಕೆಯಿಂದ ರಕ್ಷಿಸಲು ಮತ್ತು Microsoft ಖಾತೆ ಸೇವೆಯ ದಕ್ಷತೆ ಮತ್ತು ಭದ್ರತೆಯನ್ನು ರಕ್ಷಿಸಲು, ಸೈಟ್ ಅಥವಾ ಸೇವೆಯ ಪರವಾಗಿ ನಾವು ನಿಮ್ಮ ಗುರುತನ್ನು ದೃಢಪಡಿಸಲು, ಕೆಲವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ನಿಮ್ಮ Microsoft ಖಾತೆಯೊಂದಿಗೆ ನೀವು ಸೈನ್ ಇನ್ ಮಾಡಿರುವ ಸೈಟ್ ಅಥವಾ ಸೇವೆಗೆ ಸಹ ನಾವು ಕೆಲವು ಮಾಹಿತಿಯನ್ನು ಕಳುಹಿಸುತ್ತೇವೆ.
Microsoft ಖಾತೆಯನ್ನು ಹೇಗೆ ಸೃಷ್ಟಿಸುವುದು ಮತ್ತು ಬಳಸುವುದು, ಖಾತೆ ಮಾಹಿತಿಯನ್ನು ಹೇಗೆ ಬದಲಾಯಿಸುವುದು ಮತ್ತು Microsoft ಖಾತೆಯೊಂದರ ಮಾಹಿತಿಯನ್ನು ನಾವು ಹೇಗೆ ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎಂಬುದೂ ಒಳಗೊಂಡಂತೆ, Microsoft ಖಾತೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡಲು, ದಯವಿಟ್ಟು ಇನ್ನಷ್ಟು ತಿಳಿಯಿರಿ ಎಂಬುದನ್ನು ಕ್ಲಿಕ್ ಮಾಡಿ.
Microsoft ಖಾತೆ (ಈ ಹಿಂದೆ Windows Live ID ಮತ್ತು Microsoft Passport ಎಂದು ಕರೆಯಲ್ಪಡುತ್ತಿದ್ದ) ನಿಮಗೆ Microsoft ಉತ್ಪನ್ನಗಳು, ವೆಬ್ ಸೈಟ್ಗಳು ಮತ್ತು ಸೇವೆಗಳಿಗೆ ಹಾಗೂ ಆಯ್ದ Microsoft ಪಾಲುದಾರರಿಗೆ ಸೈನ್ ಇನ್ ಮಾಡಲು ಅವಕಾಶವನ್ನು ನೀಡುತ್ತದೆ. ಇದು, ಈ ಕೆಳಗೆ ಕಾಣುವ ರೀತಿಯ ಉತ್ಪನ್ನಗಳು ವೆಬ್ ಸೈಟ್ ಗಳು ಮತ್ತು ಸೇವೆಗಳನ್ನು ಒಳಗೊಂಡಿದೆ:
Microsoft ಖಾತೆಯನ್ನು ಸೃಷ್ಟಿಸುವುದು.
ನೀವು Microsoft ಖಾತೆಯನ್ನು, ಇಮೇಲ್ ವಿಳಾಸ ಪಾಸ್ವರ್ಡ್ ಹಾಗೂ ಪರ್ಯಾಯ ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಪ್ರಶ್ನೆ ಮತ್ತು ರಹಸ್ಯ ಉತ್ತರದಂತಹ ಇತರ "ಖಾತೆ ಪುರಾವೆಗಳನ್ನು" ಒದಗಿಸುವ ಮೂಲಕ ಇಲ್ಲಿ ಸೃಷ್ಟಿಸಬಹುದು. ನಿಮ್ಮ "ಖಾತೆ ಪುರಾವೆಗಳನ್ನು" ನಾವು ಭದ್ರತೆ ಉದ್ದೇಶಗಳಿಗೆ ಮಾತ್ರ ಬಳಸುತ್ತೇವೆ -ಉದಾಹರಣೆಗೆ, ನಿಮಗೆ ನಿಮ್ಮ Microsoft ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗದೆ, ನೆರವು ಬೇಕಾದ ಸಂದರ್ಭದಲ್ಲಿ, ನಿಮ್ಮ ಗುರುತನ್ನು ದೃಢಪಡಿಸಲು ಅಥವಾ ನಿಮ್ಮ Microsoft ಖಾತೆಗೆ ಸಂಬಂಧಿಸಿದ ಇಮೇಲ್ ವಿಳಾಸವನ್ನು ನಿಮಗೆ ಪ್ರವೇಶಿಸಲು ಸಾಧ್ಯವಾಗದೇ ಇದ್ದಲ್ಲಿ, ನಿಮ್ಮ ಪಾಸ್ವರ್ಡ್ ಅನ್ನು ಮರುಹೊಂದಿಸಲು. ಕೆಲವು ಸೇವೆಗಳಿಗೆ ಹೆಚ್ಚುವರಿ ಭದ್ರತೆಯ ಅಗತ್ಯವಿರಬಹುದು, ಮತ್ತು ಇಂತಹ ಸಂದರ್ಭಗಳಲ್ಲಿ, ಹೆಚ್ಚುವರಿ ಸುರಕ್ಷತೆ ಕೀಲಿಯನ್ನು ಸೃಷ್ಟಿಸಲು ನಾವು ನಿಮ್ಮನ್ನು ಕೇಳಬಹುದು. ನಿಮ್ಮ Microsoft ಖಾತೆಗೆ ಸೈನ್ ಅಪ್ ಮಾಡಲು ನೀವು ಬಳಸುವ ಇಮೇಲ್ ವಿಳಾಸ ಮತ್ತು ಪಾಸ್ವರ್ಡ್ ನಿಮ್ಮ "ರುಜುವಾತುಗಳಾಗಿರುತ್ತದೆ". ಅವನ್ನು ನೀವು ನಮ್ಮ ನೆಟ್ವರ್ಕ್ನೊಂದಿಗೆ ಪ್ರಮಾಣೀಕರಿಸಲು ಬಳಸುತ್ತೀರಿ. ಅಷ್ಟೇ ಅಲ್ಲದೆ, 64-ಬಿಟ್ ಅನನ್ಯ ID ಸಂಖ್ಯೆಯನ್ನು ನಿಮ್ಮ ರುಜುವಾತುಗಳಿಗೆ ನಿಗದಿಪಡಿಸಲಾಗುತ್ತದೆ ಮತ್ತು ಅದನ್ನು ನಿಮ್ಮ ರುಜುವಾತುಗಳನ್ನು ಮತ್ತು ಸಂಬಂಧಿತ ಮಾಹಿತಿಯನ್ನು ಗುರುತಿಸಲು ಬಳಸಲಾಗುತ್ತದೆ.
ನೀವು Microsoft ಖಾತೆಯೊಂದನ್ನು ರಚಿಸಿದಾಗ, ಈ ಕೆಳಗಿನ ಜನಸಂಖ್ಯಾ ಮಾಹಿತಿಯನ್ನು ಒದಗಿಸುವಂತೆ ನಾವು ನಿಮ್ಮನ್ನು ಕೇಳುತ್ತೇವೆ: ಲಿಂಗ; ರಾಷ್ಟ್ರ; ಜನ್ಮದಿನಾಂಕ; ಮತ್ತು ಅಂಚೆ ಕೋಡ್. ಸ್ಥಳೀಯ ಕಾನೂನಿನ ಅಗತ್ಯಕ್ಕೆ ತಕ್ಕಂತೆ, Microsoft ಖಾತೆಯನ್ನು ಬಳಸಲು ಮಕ್ಕಳು ಪೋಷಕರು ಅಥವಾ ಪಾಲಕರಿಂದ ಸೂಕ್ತ ಸಮ್ಮತಿಯನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಪರಿಶೀಲಿಸಲು ನಾವು ಜನ್ಮದಿನವನ್ನು ಬಳಸಬಹುದು. ಜೊತೆಗೆ, ಈ ಜನಸಂಖ್ಯಾ ಮಾಹಿತಿಯನ್ನು ನಿಮಗೆ ಸಹಾಯಕವೆಂದು ಕಾಣುವ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ನಿಮಗೆ ಒದಗಿಸಲು ನಮ್ಮ ಆನ್ಲೈನ್ ಜಾಹೀರಾತು ವ್ಯವಸ್ಥೆಗಳು ಬಳಸುತ್ತವೆ, ಆದರೆ ನಮ್ಮ ಜಾಹೀರಾತು ವ್ಯವಸ್ಥೆಗಳಿಗೆ ಎಂದಿಗೂ ನಿಮ್ಮ ಹೆಸರು ಮತ್ತು ಸಂಪರ್ಕ ಮಾಹಿತಿ ದೊರೆಯುವುದಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಮ್ಮ ಜಾಹೀರಾತು ವ್ಯವಸ್ಥೆಗಳು ನಿಮ್ಮನ್ನು ವೈಯಕ್ತಿಕವಾಗಿ ಮತ್ತು ನೇರವಾಗಿ ಗುರುತಿಸುವಂತಹ ಯಾವುದೇ ಮಾಹಿತಿಯನ್ನು (ನಿಮ್ಮ ಹೆಸರು ಇಮೇಲ್ ವಿಳಾಸ ಮತ್ತು ದೂರವಾಣಿ ಸಂಖ್ಯೆಯಂತಹ) ಒಳಗೊಂಡಿರುವುದಿಲ್ಲ ಮತ್ತು ಬಳಸುವುದಿಲ್ಲ. ನೀವು ಯಾವುದೇ ವೈಯಕ್ತಿಕ ಜಾಹೀರಾತುಗಳನ್ನು ಸ್ವೀಕರಿಸಲು ಇಚ್ಚಿಸದೇ ಇದ್ದಲ್ಲಿ, ನೀವು ಈ ಪುಟಕ್ಕೆ ಭೇಟಿ ನೀಡುವ ಮೂಲಕ ನಿಮ್ಮ Microsoft ಖಾತೆಯಲ್ಲಿ ನಿಮ್ಮ ಆದ್ಯತೆಯನ್ನು ನೋಂದಾಯಿಸಬಹುದು ಇದರಿಂದಾಗಿ ನೀವು ನಿಮ್ಮ Microsoft ಖಾತೆಯೊಂದಿಗೆ ಯಾವುದೇ ವೆಬ್ ಸೈಟ್ ಅಥವಾ ಸೇವೆಗಳಿಗೆ ಸೈನ್ ಇನ್ ಆದಾಗ, ನಮ್ಮ ಜಾಹೀರಾತು ವ್ಯವಸ್ಥೆ ನಿಮಗೆ ಯಾವುದೇ ವೈಯಕ್ತಿಕ ಜಾಹೀರಾತುಗಳನ್ನು ನೀಡುವುದಿಲ್ಲ. ಜಾಹೀರಾತಿಗಾಗಿ Microsoft ಯಾವ ರೀತಿಯಲ್ಲಿ ಮಾಹಿತಿಗಳನ್ನು ಬಳಸುತ್ತದೆ ಎಂಬ ಕುರಿತ ಹೆಚ್ಚಿನ ವಿವರಣೆಗೆ Microsoft ಜಾಹೀರಾತು ಗೌಪ್ಯತಾ ಅನುಬಂಧವನ್ನು ದಯವಿಟ್ಟು ನೋಡಿ.
ನಿಮ್ಮ Microsoft ಖಾತೆಗೆ ಸೈನ್ ಅಪ್ ಮಾಡುವಾಗ Microsoft ಒದಗಿಸಿದ ಇಮೇಲ್ (ಉದಾಹರಣೆಗೆ live.com, hotmail.com, ಅಥವಾ msn.com ನಲ್ಲಿ ಕೊನೆಗೊಳ್ಳುವಂತಹ) ಅಥವಾ ಮೂರನೇ ವ್ಯಕ್ತಿಯು ಒದಗಿಸಿದ ಇಮೇಲ್ (ಉದಾಹರಣೆಗೆ gmail.com ಅಥವಾ yahoo.com ನಲ್ಲಿ ಕೊನೆಗೊಳ್ಳುವಂತಹ) ವಿಳಾಸವನ್ನು ನೀವು ಬಳಸಬಹುದು.
Microsoft ಖಾತೆಯನ್ನು ಸೃಷ್ಸಿದಾಗ, ನಿಮ್ಮ Microsoft ಖಾತೆಯೊಂದಿಗೆ ಸಂಬಂಧಿಸಿರುವ ಇಮೇಲ್ ವಿಳಾಸದ ಮಾಲೀಕರು ನೀವೇ ಎಂಬುದನ್ನು ದೃಢಪಡಿಸುವಂತೆ ಕೋರಿ ಇಮೇಲ್ ಒಂದನ್ನು ನಿಮಗೆ ಕಳುಹಿಸುತ್ತೇವೆ. ಇದನ್ನು ಇಮೇಲ್ ವಿಳಾಸದ ಮಾನ್ಯತೆಯನ್ನು ಪರಿಶೀಲಿಸಲು ಮತ್ತು ಇತರರು ಮಾಲೀಕರ ಅನುಮತಿಯಿಲ್ಲದೇ ಇಮೇಲ್ ವಿಳಾಸಗಳನ್ನು ಬಳಸುವುದನ್ನು ತಪ್ಪಿಸಲು ಸಹಾಯ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಆ ನಂತರ, Microsoft ಉತ್ಪನ್ನಗಳು ಮತ್ತು ಸೇವೆಗಳ ನಿಮ್ಮ ಬಳಕೆಗೆ ಸಂಬಂಧಿಸಿದಂತೆ ಸಂವಹನಗಳನ್ನು ನಿಮಗೆ ಕಳುಹಿಸಲು ಆ ಇಮೇಲ್ ವಿಳಾಸವನ್ನು ನಾವು ಬಳಸುತ್ತೇವೆ; ಜೊತೆಗೆ, ಸ್ಥಳೀಯ ಕಾನೂನು ಅಂಗೀಕರಿಸಿದ ರೀತಿಯಲ್ಲಿ, Microsoft ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಪ್ರಚಾರ ಇಮೇಲ್ಗಳನ್ನು ಸಹ ನಾವು ನಿಮಗೆ ಕಳುಹಿಸಬಹುದು. ಪ್ರಚಾರದ ಸಂವಹನಗಳ ನಿಮ್ಮ ಸ್ವೀಕೃತಿಯನ್ನು ನಿರ್ವಹಿಸುವ ಕುರಿತ ಮಾಹಿತಿಗಾಗಿ, ದಯವಿಟ್ಟು ಸಂವಹನಗಳು ಎಂಬಲ್ಲಿಗೆ ಭೇಟಿ ನೀಡಿ.
ಒಂದು ವೇಳೆ ನೀವು Microsoft ಖಾತೆಗೆ ನೋಂದಣಿ ಮಾಡಲು ಪ್ರಯತ್ನಿಸಿದಾಗ ನಿಮ್ಮ ಇಮೇಲ್ ವಿಳಾಸವನ್ನು ಬಳಕೆದಾರ ಹೆಸರನ್ನಾಗಿ ಉಪಯೋಗಿಸಿಕೊಂಡು ಬೇರೊಬ್ಬ ವ್ಯಕ್ತಿಯು ಈಗಾಗಲೇ ರುಜುವಾತುಗಳನ್ನು ಸೃಷ್ಟಿಸಿದ್ದಾರೆ ಎಂಬುದು ಕಂಡು ಬಂದರೆ, ನೀವು ನಮ್ಮನ್ನು ಸಂಪರ್ಕಿಸಬಹುದು ಹಾಗೂ ನಿಮ್ಮ ರುಜುವಾತುಗಳನ್ನು ಸೃಷ್ಟಿಸುವಾಗ, ನಿಮ್ಮ ಇಮೇಲ್ ವಿಳಾಸವನ್ನೇ ನೀವು ಬಳಸಲು ಸಾಧ್ಯವಾಗುವಂತೆ ಆ ಬೇರೆ ವ್ಯಕ್ತಿಯು ವಿಭಿನ್ನ ಬಳಕೆದಾರ ಹೆಸರನ್ನು ಅಳವಡಿಸಿಕೊಳ್ಳುವಂತೆ ನೀವು ವಿನಂತಿಸಬಹುದು.
ನಿಮ್ಮ Microsoft ಖಾತೆಯೊಂದಿಗೆ ಸಾಫ್ಟ್ವೇರ್, ಸೈಟ್ಗಳು ಮತ್ತು ಸೇವೆಗಳಿಗೆ ಸೈನ್ ಇನ್ ಮಾಡುವುದು.
ನಿಮ್ಮ Microsoft ಖಾತೆಯನ್ನು ಬಳಸಿ ನೀವು ಸೈಟ್ ಅಥವಾ ಸೇವೆಗೆ ಸೈನ್ ಇನ್ ಮಾಡಿದಾಗ, ನಿಮ್ಮನ್ನು ದುರುದ್ದೇಶಪೂರಿತ ಖಾತೆ ಬಳಕೆಯಿಂದ ಮತ್ತು Microsoft ಖಾತೆ ಸೇವೆಯ ದಕ್ಷತೆ ಮತ್ತು ಭದ್ರತೆಯನ್ನು ರಕ್ಷಿಸಲು, ಸೈಟ್ ಅಥವಾ ಸೇವೆಯ ಪರವಾಗಿ ನಿಮ್ಮ ಗುರುತನ್ನು ದೃಢಪಡಿಸಲು ನಾವು ಕೆಲವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಉದಾಹರಣೆಗಾಗಿ, ನೀವು ಸೈನ್ ಇನ್ ಮಾಡಿದಾಗ, Microsoft ಖಾತೆ ಸೇವೆಯು ನಿಮ್ಮ ರುಜುವಾತುಗಳಿಗೆ ನಿಗದಿಪಡಿಸಿದ 64-ಬಿಟ್ ಅನನ್ಯ ID ಸಂಖ್ಯೆ, ನಿಮ್ಮ IP ವಿಳಾಸ, ನಿಮ್ಮ ವೆಬ್ ಬ್ರೌಸರ್ ಆವೃತ್ತಿ ಮತ್ತು ಸಮಯ ಮತ್ತು ದಿನಾಂಕದಂತಹ ಇತರ ಮಾಹಿತಿಯನ್ನು ಸ್ವೀಕರಿಸುತ್ತದೆ. ಜೊತೆಗೆ, ನೀವು ಯಾವುದಾದರೋ ಸಾಧನದಲ್ಲಿ ಅಥವಾ ಸಾಧನದಲ್ಲಿ ಅನುಷ್ಟಾನಗೊಳಿಸಿರುವ ಸಾಫ್ಟ್ವೇರ್ಗೆ ಸೈನ್ ಇನ್ ಮಾಡಲು, Microsoft ಖಾತೆಯನ್ನು ಬಳಸಿದರೆ, ಒಂದು ಯಾದೃಚ್ಛಿಕವಾದ ಅನನ್ಯ ID ಯನ್ನು ಸಾಧನಕ್ಕೆ ನಿಗದಿಪಡಿಸಲಾಗುತ್ತದೆ; ಈ ಯಾದೃಚ್ಛಿಕವಾದ ಅನನ್ಯ ID ಯನ್ನು ನಿಮ್ಮ ರುಜುವಾತುಗಳ ಭಾಗವಾಗಿ ಆನಂತರದಲ್ಲಿ ನೀವು Microsoft ಖಾತೆಯೊಂದಿಗೆ ಸೈಟ್ ಅಥವಾ ಸೇವೆಗೆ ಸೈನ್ ಇನ್ ಮಾಡಿದಾಗ Microsoft ಖಾತೆ ಸೇವೆಗೆ ಕಳುಹಿಸಲಾಗುತ್ತದೆ. ನೀವು ಸೈನ್ ಇನ್ ಮಾಡಿರುವ ಸೈಟ್ ಅಥವಾ ಸೇವೆಗೆ ಈ ಕೆಳಗಿನ ಮಾಹಿತಿಯನ್ನು Microsoft ಖಾತೆ ಸೇವೆಯು ಕಳುಹಿಸುತ್ತದೆ: ಒಂದು ಸೈನ್-ಇನ್ ಸೆಷನ್ನಿಂದ ಮತ್ತೊಂದಕ್ಕೆ, ನೀವು ಅದೇ ವ್ಯಕ್ತಿಯೇ ಎಂಬುದನ್ನು ನಿರ್ಣಯಿಸಲು ಸೈಟ್ ಅಥವಾ ಸೇವೆಯನ್ನು ಅನುಮತಿಸುವ ಅನನ್ಯ ID ಸಂಖ್ಯೆ; ನಿಮ್ಮ ಖಾತೆಗೆ ನಿಗದಿಪಡಿಸಿದ ಆವೃತ್ತಿ ಸಂಖ್ಯೆ (ನಿಮ್ಮ ಸೈನ್-ಇನ್ ಮಾಹಿತಿಯನ್ನು ಪ್ರತಿ ಬಾರಿ ನೀವು ಬದಲಾಯಿಸಿದಾಗ ಹೊಸ ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ); ನಿಮ್ಮ ಇಮೇಲ್ ವಿಳಾಸವನ್ನು ದೃಢಪಡಿಸಲಾಗಿದೆಯೇ; ಮತ್ತು ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆಯೇ.
Microsoft ಖಾತೆಯೊಂದಿಗೆ ಸೈನ್ ಇನ್ ಮಾಡಲು ನಿಮಗೆ ಅನುಮತಿಸುವ ಕೆಲ ಮೂರನೇ ವ್ಯಕ್ತಿ ಸೈಟ್ಗಳು ಮತ್ತು ಸೇವೆಗಳಿಗೆ ಆ ಸೇವೆಯನ್ನು ನಿಮಗೆ ಒದಗಿಸಲು ನಿಮ್ಮ ಇಮೇಲ್ ವಿಳಾಸವು ಅಗತ್ಯವಿರುತ್ತದೆ. ಅಂತಹ ಸಂದರ್ಭದಲ್ಲಿ, ನೀವು ಸೈನ್ ಇನ್ ಮಾಡಿದಾಗ, Microsoft ನಿಮ್ಮ ಇಮೇಲ್ ವಿಳಾಸವನ್ನು ಒದಗಿಸುತ್ತದೆ. ಆದರೆ ಸೈಟ್ ಮತ್ತು ಸೇವೆಗಳಿಗೆ ನಿಮ್ಮ ಪಾಸ್ ವರ್ಡ್ ಅನ್ನು ಒದಗಿಸುವುದಿಲ್ಲ. ಆದರೆ, ಸೈಟ್ ಅಥವಾ ಸೇವೆಯೊಂದಿಗೆ ನಿಮ್ಮ ರುಜುವಾತುಗಳನ್ನು ನೀವು ಸೃಷ್ಟಿಸಿದ್ದರೆ, ನಿಮ್ಮ ಪಾಸ್ ವರ್ಡ್ ಅನ್ನು ಮರುಹೊಂದಿಸಲು ಅಥವಾ ಇತರ ಬೆಂಬಲ ಸೇವೆಗಳನ್ನು ಒದಗಿಸಲು ನಿಮ್ಮ ರುಜುವಾತುಗಳಿಗೆ ಸಂಬಂಧಿಸಿದ ಮಾಹಿತಿಗೆ ಸೀಮಿತ ಪ್ರವೇಶವನ್ನು ಅದು ನೀಡಬಹುದು.
ಶಾಲೆ, ವ್ಯವಹಾರ, ಅಂತರ್ಜಾಲ ಸೇವೆ ನೀಡುವ ಸಂಸ್ಥೆ ಅಥವಾ ನಿರ್ವಹಿಸಲ್ಪಡುತ್ತಿರುವ ಡೊಮೇನ್ನ ನಿರ್ವಾಹಕನಂತಹ ಮೂರನೇ ವ್ಯಕ್ತಿಯಿಂದ ನೀವು ನಿಮ್ಮ ಖಾತೆ ಪಡೆದಿದ್ದರೆ, ಆ ಮೂರನೇ ವ್ಯಕ್ತಿ, ನಿಮ್ಮ ಪಾಸ್ವರ್ಡ್ ಮರುಹೊಂದಿಸುವುದು, ನಿಮ್ಮ ಖಾತೆ ಬಳಕೆ ಅಥವಾ ಪ್ರೊಫೈಲ್ ಮಾಹಿತಿ ವೀಕ್ಷಿಸುವುದು, ನಿಮ್ಮ ಖಾತೆಯಲ್ಲಿ ವಿಷಯವನ್ನು ಓದುವುದು ಅಥವಾ ಸಂಗ್ರಹಿಸುವುದು ಮತ್ತು ನಿಮ್ಮ ಖಾತೆಯನ್ನು ಅಮಾನತುಗೊಳಿಸುವುದು ಅಥವಾ ರದ್ದುಗೊಳಿಸುವುದೂ ಸೇರಿದಂತೆ, ನಿಮ್ಮ ಖಾತೆಯ ಮೇಲೆ ಹಲವು ಅಧಿಕಾರವನ್ನು ಹೊಂದಿರಬಹುದು. ಇಂತಹ ಸಂದರ್ಭಗಳಲ್ಲಿ, ನೀವು Microsoft ಸೇವಾ ಒಪ್ಪಂದಕ್ಕೆ ಮತ್ತು ಮೂರನೇ ವ್ಯಕ್ತಿಯ ಯಾವುದೇ ಹೆಚ್ಚುವರಿ ಬಳಕೆ ನಿಯಮಗಳಿಗೆ ಒಳಪಟ್ಟಿರುತ್ತೀರಿ. ಒಂದು ವೇಳೆ ನೀವು ನಿರ್ವಹಿಸಲ್ಪಡುತ್ತಿರುವ ಡೊಮೇನ್ನ ನಿರ್ವಾಹಕರಾಗಿದ್ದು ಮತ್ತು ನಿಮ್ಮ ಬಳಕೆದಾರರಿಗೆ Microsoft ಖಾತೆಗಳನ್ನು ಒದಗಿಸಿದ್ದರೆ, ಅಂತಹ ಖಾತೆಗಳೊಳಗೆ ನಡೆಯುವ ಎಲ್ಲಾ ಚಟುವಟಿಕೆಗಳಿಗೆ ನೀವು ಜವಾಬ್ದಾರರಾಗಿರುತ್ತೀರಿ.
ದಯವಿಟ್ಟು ಗಮನಿಸಿ ನಿಮ್ಮ Microsoft ಖಾತೆಯೊಂದಿಗೆ ಸೈನ್ ಇನ್ ಮಾಡಲು ಅನುಮತಿಸುವ ಸೈಟ್ಗಳು ಮತ್ತು ಸೇವೆಗಳು ಅವುಗಳಿಗೆ ನೀವು ಒದಗಿಸುವ ನಿಮ್ಮ ಇಮೇಲ್ ವಿಳಾಸ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಅವುಗಳ ಗೌಪ್ಯತಾ ಪ್ರಕಟಣೆಯಲ್ಲಿ ವಿವರಿಸಲಾದಂತೆ ಬಳಸಬಹುದು ಅಥವಾ ಹಂಚಿಕೊಳ್ಳಬಹುದು. ಆದರೆ, Microsoft ಖಾತೆ ಸೇವೆಯು ಅವರಿಗೆ ಒದಗಿಸಿದ ಅನನ್ಯ ID ಸಂಖ್ಯೆಯನ್ನು ನೀವು ವಿನಂತಿಸಿರಬಹುದಾದ ಸೇವೆ ಅಥವಾ ವ್ಯವಹಾರವನ್ನು ಪೂರ್ಣಗೊಳಿಸಲು ಮಾತ್ರ ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಹುದು. Microsoft ಖಾತೆಯನ್ನು ಬಳಸುವ ಎಲ್ಲ ಸೈಟ್ಗಳು ಮತ್ತು ಸೇವೆಗಳು ಗೌಪ್ಯತಾ ಪ್ರಕಟಣೆಗಳನ್ನು ಪ್ರದರ್ಶಿಸುವ ಅಗತ್ಯವಿದೆ, ಆದರೆ ನಾವು ಆ ಸೈಟ್ಗಳ ಗೌಪ್ಯತಾ ಅಭ್ಯಾಸಗಳನ್ನು ನಿಯಂತ್ರಿಸುವುದಿಲ್ಲ ಅಥವಾ ನಿಗಾ ವಹಿಸುವುದಿಲ್ಲ, ಮತ್ತು ಅದರ ಗೌಪ್ಯತಾ ಅಭ್ಯಾಸಗಳು ಬದಲಾಗುತ್ತಿರುತ್ತವೆ. ಪ್ರತಿ ಸೈಟ್ ಮತ್ತು ಸೇವೆಗಳು ಅವುಗಳು ಸಂಗ್ರಹಿಸಿದ ಮಾಹಿತಿಯನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತವೆ ಎಂಬುದನ್ನು ತಿಳಿಯಲು, ನೀವು ಸೈನ್ ಇನ್ ಮಾಡುವ ಪ್ರತಿಯೊಂದು ಸೈಟ್ನ ಗೌಪ್ಯತಾ ಹೇಳಿಕೆಯನ್ನು ನೀವು ಎಚ್ಚರಿಕೆಯಿಂದ ಪರಿಶೀಲಿಸಬೇಕು.
ನಿಮ್ಮ ವೈಯಕ್ತಿಕ ಮಾಹಿತಿಪುಟವನ್ನು ಪ್ರವೇಶಿಸುವುದು. ನಿಮ್ಮ Microsoft ಖಾತೆಯು, ನಿರ್ವಹಿಸಲ್ಪಟ್ಟ ಡೊಮೇನ್ಗೆ ಸೇರದೇ ಇದ್ದರೆ, ನೀವು ನಿಮ್ಮ ಬಳಕೆದಾರರ ಹೆಸರನ್ನು ಬದಲಾಯಿಸಬಹುದು. ನೀವು ಯಾವಾಗ ಬೇಕಿದ್ದರೂ ನಿಮ್ಮ ಪಾಸ್ವರ್ಡ್, ಪರ್ಯಾಯ ಇ-ಮೇಲ್ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಪ್ರಶ್ನೆ ಮತ್ತು ರಹಸ್ಯ ಉತ್ತರವನ್ನು ಬದಲಾಯಿಸಬಹುದು. ನೀವು ನಿಮ್ಮ Microsoft ಖಾತೆಯನ್ನು, ಕೊನೆಗೊಳಿಸ ಬಯಸಿದ್ದಲ್ಲಿಖಾತೆ "ಖಾತೆ ಕೊನೆಗಳಿಸಿ" ಎಂಬುದನ್ನು ಆಯ್ಕೆ ಮಾಡುವ ಮೂಲಕ ಅದನ್ನು ಮಾಡಬಹುದು. ಮೇಲೆ ವಿವರಿಸಿದಂತೆ ನಿಮ್ಮ ಖಾತೆಯು ನಿರ್ವಹಿಸಲ್ಪಡುತ್ತಿರುವ ಡೊಮೇನ್ನಲ್ಲಿ ಇದ್ದರೆ, ನಿಮ್ಮ ಖಾತೆಯನ್ನು ಕೊನೆಗೊಳಿಸಲು ವಿಶೇಷ ಪ್ರಕ್ರಿಯೆಗಳಿರಬಹುದು. ನೀವು MSN ಅಥವಾ Windows Live ಬಳಕೆದಾರರಾಗಿದ್ದರೆ, ನೀವು ಖಾತೆಗೆ ಹೋದಾಗ, ಆ ಸೈಟ್ಗಳ ಖಾತೆಗೆ ನಿಮ್ಮನ್ನು ಮರುನಿರ್ದೇಶಿಸಬಹುದು ಎಂಬುದನ್ನು ದಯವಿಟ್ಟು ಗಮನಿಸಿ.
Microsoft ಖಾತೆ ಕುರಿತ ಹೆಚ್ಚಿನ ಮಾಹಿತಿ Microsoft ಖಾತೆ ವೆಬ್ ಸೈಟ್ ನಲ್ಲಿ ಲಭ್ಯವಿದೆ.
ಇದರ ಬಗ್ಗೆ ಇನ್ನಷ್ಟು ತಿಳಿಯಿರಿ
ಈ ಕೆಳಗೆ ನೀವು ಪ್ರಮುಖವೆಂದು ಭಾವಿಸುವ (ಭಾವಿಸದೇ ಇರುವ) ಹೆಚ್ಚುವರಿ ಗೌಪ್ಯತೆ ಮಾಹಿತಿಯನ್ನು ಕಾಣುತ್ತೀರಿ. ಇವುಗಳಲ್ಲಿ ಬಹುಪಾಲು ಅಂಶಗಳು ನೀವು ತಿಳಿದಿರಬೇಕೆಂದು ನಾವು ಬಯಸುವ ಆದರೆ ನಮ್ಮ ಪ್ರತಿ ಗೌಪ್ಯತೆ ಹೇಳಿಕೆಗಳಲ್ಲಿ ಎದ್ದುಗಾಣಿಸಲು ಅಗತ್ಯವಿದೆಯೆಂದು ಭಾವಿಸದ ಸಾಮಾನ್ಯ ಅಭ್ಯಾಸಗಳನ್ನು ವಿವರಿಸುತ್ತದೆ . ಆದರೆ ಇವುಗಳಲ್ಲಿ ಕೆಲವು ಕೇವಲ ಸುಸ್ಪಷ್ಟವಾದ (ಉದಾಹರಣೆಗಾಗಿ, ಕಾನೂನಿನ ಪ್ರಕಾರವಾಗಿ ಅದು ಅಗತ್ಯವಾದಾಗ ನಾವು ಮಾಹಿತಿಯನ್ನು ಬಹಿರಂಗಪಡಿಸುತ್ತೇವೆ), ಆದರೆ ನಮ್ಮ ವಕೀಲರು ಅದನ್ನು ಹೇಗಾದರೂ ಹೇಳುವಂತೆ ಮಾಡುತ್ತಾರೆ. ಈ ಮಾಹಿತಿಯು ನಮ್ಮ ಆಚರಣೆಗಳ ಸಂಪೂರ್ಣ ವಿವರಣೆಯಲ್ಲ ಎಂಬುದನ್ನು ದಯವಿಟ್ಟು ಮನಸ್ಸಿನಲ್ಲಿಟ್ಟುಕೊಳ್ಳಿ - ಇವೆಲ್ಲವೂ ನೀವುಬಳಸುವ ಪ್ರತಿ Microsoft ಉತ್ಪನ್ನ ಮತ್ತು ಸೇವೆಗಳ ಗೌಪ್ಯತೆ ಹೇಳಿಕೆಯಲ್ಲಿ ಒಳಗೊಂಡಿರುವ ಇತರ, ಹೆಚ್ಚು ನಿರ್ದಿಷ್ಟವಾದ ಮಾಹಿತಿಗೆ ಹೆಚ್ಚುವರಿ ಯಾಗಿದೆ.
ಈ ಪುಟದಲ್ಲಿ:
ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು ಅಥವಾ ಬಹಿರಂಗಪಡಿಸುವುದು
ನೀವು ಬಳಸುತ್ತಿರುವ ಉತ್ಪನ್ನ ಅಥವಾ ಸೇವೆಯ ಗೌಪ್ಯತೆ ಹೇಳಿಕೆಯಲ್ಲಿ ವಿವರಿಸಿದಂತೆ ಯಾವುದೇ ಹಂಚಿಕೆ ಜೊತೆಗೆ, ವೈಯಕ್ತಿಕ ಮಾಹಿತಿಯನ್ನು Microsoft ಹಂಚಿಕೊಳ್ಳಬಹುದು ಅಥವಾ ಬಹಿರಂಗಪಡಿಸಬಹುದು:
ನಿಮ್ಮ ಸಂವಹನಗಳ ವಿಷಯವನ್ನು ಒಳಗೊಂಡು ನಾವು ಸಹ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಹುದು ಅಥವಾ ಬಹಿರಂಗಪಡಿಸಬಹುದು:
ನಮ್ಮ ಸೈಟ್ಗಳು ಬಾಹ್ಯ ಸಂಸ್ಥೆಗಳ ಸೈಟ್ಗಳಿಗೆ ಲಿಂಕ್ಗಳನ್ನು ಒಳಗೊಂಡಿರಬಹುದು ಮತ್ತು ಅವುಗಳ ಗೌಪ್ಯತೆ ಆಚರಣೆಗಳು Microsoftಗಿಂತ ಭಿನ್ನವಾಗಿರಬಹುದು. ಆ ಯಾವುದೇ ಸೈಟ್ಗಳಿಗೆ ನೀವು ವೈಯಕ್ತಿಕ ಮಾಹಿತಿಯನ್ನು ಸಲ್ಲಿಸಿದರೆ, ನಿಮ್ಮ ಮಾಹಿತಿಯು ಆ ಸೈಟ್ಗಳ ಗೌಪ್ಯತೆ ಹೇಳಿಕೆಗಳಿಗೆ ಒಳಪಟ್ಟಿರುತ್ತದೆ. ನೀವು ಭೇಟಿ ನೀಡುವ ಯಾವುದೇ ಸೈಟ್ನ ಗೌಪ್ಯತೆ ಹೇಳಿಕೆಯನ್ನು ವಿಮರ್ಶಿಸುವಂತೆ ನಿಮ್ಮನ್ನು ನಾವು ಪ್ರೋತ್ಸಾಹಿಸುತ್ತೇವೆ.
ವೈಯಕ್ತಿಕ ಮಾಹಿತಿಯ ಭದ್ರತೆಯನ್ನು ರಕ್ಷಿಸುವುದು
Microsoft ನಿಮ್ಮ ವೈಯಕ್ತಿಕ ಮಾಹಿತಿಯ ಭದ್ರತೆಯನ್ನು ರಕ್ಷಿಸಲು ಬದ್ಧವಾಗಿದೆ. ಅನಧಿಕೃತ ಪ್ರವೇಶ, ಬಳಕೆ, ಅಥವಾ ಬಹಿರಂಗಪಡಿಸುವಿಕೆಯಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಸಹಾಯ ಮಾಡಲು ನಾವು ವಿವಿಧ ಭದ್ರತೆ ತಂತ್ರಜ್ಞಾನವನ್ನು ಮತ್ತು ಕಾರ್ಯವಿಧಾನಗಳನ್ನು ಬಳಸುತ್ತೇವೆ. ಉದಾಹರಣೆ, ಸೀಮಿತ ಪ್ರವೇಶವನ್ನು ಹೊಂದಿರುವ ಕಂಪ್ಯೂಟರ್ ವ್ಯವಸ್ಥೆಗಳಲ್ಲಿ ನೀವು ಒದಗಿಸಿದ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ ಮತ್ತು ಅವುಗಳು ನಿಯಂತ್ರಿತ ಸೌಲಭ್ಯಗಳಲ್ಲಿರುತ್ತದೆ. ಇಂಟರ್ನೆಟ್ನಲ್ಲಿ (ಕ್ರೆಡಿಟ್ ಕಾರ್ಡ್ ಸಂಖ್ಯೆ ಮತ್ತು ಪಾಸ್ವರ್ಡ್ನಂತಹ) ಉನ್ನತ ಗೌಪ್ಯ ಮಾಹಿತಿಯನ್ನು ನಾವು ರವಾನಿಸಿದಾಗ, ಸೆಕ್ಯುರ್ ಸಾಕೆಟ್ ಲೇಯರ್ (SSL) ಪ್ರೋಟೊಕಾಲ್ನಂತಹ ಗೂಢಲಿಪೀಕರಣದ ಬಳಕೆಯ ಮೂಲಕ ನಾವು ಅದನ್ನು ರಕ್ಷಿಸುತ್ತೇವೆ.
ನಿಮ್ಮ ಖಾತೆಗಳು ಮತ್ತು ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಸಹಾಯ ಮಾಡಲು ಪಾಸ್ವರ್ಡ್ ಬಳಸಿದರೆ, ನಿಮ್ಮ ಪಾಸ್ವರ್ಡ್ ಅನ್ನು ಗೌಪ್ಯವಾಗಿಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ. ಅದನ್ನು ಹಂಚಿಕೊಳ್ಳಬೇಡಿ. ನೀವು ಕಂಪ್ಯೂಟರ್ ಅನ್ನು ಹಂಚಿಕೊಳ್ಳುತ್ತಿದ್ದರೆ, ನೀವು ಸೈಟ್ ಅಥವಾ ಸೇವೆಯನ್ನು ಬಿಡುವ ಮೊದಲು ಮುಂದಿನ ಬಳಕೆದಾರರಿಂದ ನಿಮ್ಮ ಮಾಹಿತಿ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ಯಾವಾಗಲೂ ಲಾಗ್ ಔಟ್ ಮಾಡಬೇಕು.
ಮಾಹಿತಿಯನ್ನು ಸಂಗ್ರಹಿಸಲಾಗುವ ಮತ್ತು ಸಂಸ್ಕರಿಸಲಾಗುವ ಸ್ಥಳದಲ್ಲಿ
Microsoft ಸೈಟ್ಗಳು ಮತ್ತು ಸೇವೆಗಳಲ್ಲಿ ಸಂಗ್ರಹಿಸಿದ ವೈಯಕ್ತಿಕ ಮಾಹಿತಿಗಳ ಯುನೈಟೆಡ್ ಸ್ಟೇಟ್ಸ್ ಅಥವಾ Microsoft ಅಥವಾ ಅದರ ಅಂಗಸಂಸ್ಥೆಗಳಿರುವ ಇತರ ಯಾವುದೇ ದೇಶ, ಸಹಾಯಕರು ಅಥವಾ ಸೌಕರ್ಯ ನಿರ್ವಹಿಸುವ ಸೇವೆ ಒದಗಿಸುವವರಲ್ಲಿ ಸಂಗ್ರಹವಾಗುತ್ತದೆ. ಯುರೋಪಿಯನ್ ಎಕನಾಮಿಕ್ ಪ್ರದೇಶ ಮತ್ತು ಸ್ವಿಟ್ಜರ್ಲೆಂಡ್ನಿಂದ ಡೇಟಾದ ಸಂಗ್ರಹಣೆ, ಬಳಕೆ ಮತ್ತು ಉಳಿಸಿಕೊಳ್ಳುವಿಕೆಯ ಕುರಿತಂತೆ ಯು.ಎಸ್. ವಾಣಿಜ್ಯ ಇಲಾಖೆಯಿಂದ ನಿಗದಿಪಡಿಸಿದ ಯು.ಎಸ್-ಇಯು ಸುರಕ್ಷಿತ ಹಾರ್ಬರ್ ಫ್ರೇಮ್ವರ್ಕ್ ಮತ್ತು ಯು.ಎಸ್.-ಸ್ವಿಸ್ ಸುರಕ್ಷಿತ ಹಾರ್ಬಲ್ ಫ್ರೇಮ್ವರ್ಕ್ಗೆ Microsoft ಬದ್ಧವಾಗಿರುತ್ತದೆ. ಸುರಕ್ಷಿತ ಹಾರ್ಬರ್ ಪ್ರೋಗ್ರಾಂ ಕುರಿತು ಮತ್ತಷ್ಟು ತಿಳಿಯಲು ಮತ್ತು ನಮ್ಮ ಪ್ರಮಾಣೀಕರಣವನ್ನು ವೀಕ್ಷಿಸಲು, ದಯವಿಟ್ಟು ಭೇಟಿ ನೀಡಿ http://www.export.gov/safeharbor/.
ಸುರಕ್ಷಿತ ಹಾರ್ಬರ್ ಪ್ರೋಗ್ರಾಂನಲ್ಲಿ Microsoft ಭಾಗವಹಿಸುವಿಕೆಯ ಭಾಗವಾಗಿ, ನೀವು ನಮ್ಮ ನೀತಿಗಳು ಮತ್ತು ಅಭ್ಯಾಸಗಳಿಗೆ ಸಂಬಂಧಿಸಿದಂತೆ ಹೊಂದಿರುವ ವಿವಾದಗಳನ್ನು ಪರಿಹರಿಸಲು ಸ್ವತಂತ್ರ ತೃತೀಯ ಪಕ್ಷವಾದ TRUSTe ಅನ್ನು ನಾವು ಬಳಸುತ್ತೇವೆ. TRUSTe ಅನ್ನು ನೀವು ಸಂಪರ್ಕಿಸಲು ಬಯಸಿದರೆ, ದಯವಿಟ್ಟು ಗೆ ಭೇಟಿ ನೀಡಿ. https://feedback-form.truste.com/watchdog/request.
ನಮ್ಮ ಕಾನೂನು ಕಟ್ಟುಪಾಡುಗಳನ್ನು ಅನುಸರಿಸುವುದು, ವ್ಯಾಜ್ಯಗಳನ್ನು ಬಗೆಹರಿಸುವುದು, ನಮ್ಮ ಒಪ್ಪಂದಗಳನ್ನು ಜಾರಿಗೊಳಿಸುವುದಂತಹ ವಿವಿಧ ಕಾರಣಗಳಿಗೋಸ್ಕರ ಮತ್ತು ಸೇವೆಗಳನ್ನು ಎಷ್ಟು ಅವಧಿಯವರಿಗೆ ಸಾಧ್ಯವೋ ಅಷ್ಟು ಒದಗಿಸಲು ನಿಮ್ಮ ವೈಯಕ್ತಿಕ ಮಾಹಿತಿಯನ್ನು Microsoft ಉಳಿಸಿಕೊಳ್ಳಬಹುದು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೇಗೆ ಪ್ರವೇಶಿಸಬೇಕೆಂದು ತಿಳಿಯಲು, ನಿಮ್ಮ ಮಾಹಿತಿ ಪಡೆಯಲು ಭೇಟಿ ನೀಡಿ. ನಿಮ್ಮ ಮಾಹಿತಿಯನ್ನು ಪ್ರವೇಶಿಸುವುದು.
ನಮ್ಮ ಗೌಪ್ಯತಾ ಹೇಳಿಕೆಗಳಿಗೆ ಬದಲಾವಣೆಗಳು
ನಾವು ಕೆಲವೊಮ್ಮೆ ಗ್ರಾಹಕ ಮರುಮಾಹಿತಿ ಮತ್ತು ನಮ್ಮ ಸೇವೆಗಳ ಬದಲಾವಣೆಗಳನ್ನು ಪ್ರತಿಬಿಂಬಿಸಲು ನಮ್ಮ ಗೌಪ್ಯತೆ ಹೇಳಿಕೆಗಳನ್ನು ನವೀಕರಿಸುತ್ತೇವೆ. ಈ ಹೇಳಿಕೆಯಲ್ಲಿ ನಾವು ಬದಲಾವಣೆಗಳನ್ನು ನಮೂದಿಸಿದಾಗ, ಹೇಳಿಕೆಯ ಮೇಲೆ "ಕೊನೆಯ ಬಾರಿ ನವೀಕರಿಸಿದ" ದಿನಾಂಕವನ್ನು ನಾವು ಪರಿಷ್ಕರಿಸುತ್ತೇವೆ. ಈ ಹೇಳಿಕೆಯಲ್ಲಿ ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು Microsoft ಹೇಗೆ ಬಳಸುತ್ತದೆ ಎನ್ನುವುದರಲ್ಲಿ ಪ್ರಮುಖ ಬದಲಾವಣೆಗಳಾದರೆ, ಅಂತಹ ಬದಲಾವಣೆಗಳು ಜಾರಿಗೆ ಬರುವ ಮೊದಲು, ಅಂತಹ ಬದಲಾವಣೆಗಳ ಸೂಚನೆಯನ್ನು ಮುಖ್ಯವಾಗಿ ಪೋಸ್ಟ್ ಮಾಡುವ ಮೂಲಕ ಅಥವಾ ನಿಮಗೆ ನೇರವಾಗಿ ಸೂಚನೆಯನ್ನು ಕಳುಹಿಸುವ ಮೂಲಕ ನಿಮಗೆ ಸೂಚಿಸುತ್ತೇವೆ. ನಿಮ್ಮ ಮಾಹಿತಿಯನ್ನು Microsoft ಹೇಗೆ ರಕ್ಷಿಸುತ್ತಿದೆ ಎಂಬುದರ ಬಗ್ಗೆ ತಿಳಿಯಲು ನೀವು ಬಳಸುವ ಉತ್ಪನ್ನಗಳು ಮತ್ತು ಸೇವೆಗಳ ಗೌಪ್ಯತೆ ಹೇಳಿಕೆಯನ್ನು ನಿಯತಕಾಲಿಕವಾಗಿ ವಿಮರ್ಶಿಸುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ.
ನಮ್ಮನ್ನು ಹೇಗೆ ಸಂಪರ್ಕಿಸುವುದು
Microsoft Privacy, Microsoft Corporation, One Microsoft Way, Redmond, Washington 98052 USA
ನಿಮ್ಮ ದೇಶ ಅಥವಾ ವಲಯದಲ್ಲಿ Microsoftನ ಅಂಗಸಂಸ್ಥೆಗಳನ್ನು ಹುಡುಕಲು http://www.microsoft.com/worldwide/ ನೀಡಿ.
ಎಫ್ ಟಿ ಸಿ ಗೌಪ್ಯತಾ ಕ್ರಮಗಳು
ಮನೆಯಲ್ಲಿ ಭದ್ರತೆ
Trustworthy Computing